ಸೆಪ್ಟಂಬರ್ 30 ರೊಳಗೆ ಅಂತಿಮ ವರ್ಷದ ಕಾಲೇಜು ಪರೀಕ್ಷೆಗಳು ನಡೆಯಬೇಕು: ಸುಪ್ರೀಂಕೋರ್ಟ್

Update: 2020-08-28 05:53 GMT

ಹೊಸದಿಲ್ಲಿ, ಆ.28: ಅಂತಿಮ ವರ್ಷದ ಕಾಲೇಜು ಪರೀಕ್ಷೆಗಳು ಸೆಪ್ಟಂಬರ್ 30ಕ್ಕೆ ನಡೆಯಬೇಕು ಎಂದು ಇಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮಂಡಳಿಯ ನಿರ್ಧಾರವನ್ನು ಎತ್ತಿಹಿಡಿದಿದೆ.

ಅಂತಿಮ ವರ್ಷದ ಪರೀಕ್ಷೆಗಳಿಲ್ಲದೆ ರಾಜ್ಯಗಳು ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಭಡ್ತಿ ನೀಡಲು ಸಾಧ್ಯವಿಲ್ಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾಲೇಜಿನ ಪದವಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಎಂದು ಆಗ್ರಹಿಸಿ ಯುವ ಸೇನೆಯ ನಾಯಕ ಆದಿತ್ಯ ಠಾಕ್ರೆ ಸಹಿತ ಹಲವು ಅರ್ಜಿದಾರರು ನ್ಯಾಯಾಲಯ ಮೊರೆ ಹೋಗಿದ್ದರು.ಕೊರೋನ ವೈರಸ್‌ನಿಂದ ಎಲ್ಲ ಶಿಕ್ಷಣಸಂಸ್ಥೆಗಳು ಮುಚ್ಚಲ್ಪಟ್ಟಿರುವ ಕಾರಣ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟದ ಕುರಿತು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದರು.

ಸೆಪ್ಟಂಬರ್ ಅಂತ್ಯಕ್ಕೆ ಪರೀಕ್ಷೆಗಳನ್ನು ನಡೆಸುವಂತೆ ಯುನಿವರ್ಸಿಟಿ ಗ್ರಾಂಟ್ಸ್ ಕಮಿಶನ್(ಯುಜಿಸಿ)ಆದೇಶಿಸಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕೆ ಭದ್ರತೆಯನ್ನು ರಕ್ಷಿಸಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.ಪರೀಕ್ಷೆಗಳಿಲ್ಲದೆ ಪದವಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಯುಜಿಸಿ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News