ಸ್ವೀಡನ್: ‍ಮುಸ್ಲಿಂ ವಿರೋಧಿ ಬಲಪಂಥೀಯ ರಾಜಕಾರಣಿಗೆ 2 ವರ್ಷಗಳ ನಿಷೇಧ

Update: 2020-08-30 09:49 GMT

ಸ್ವೀಡನ್: ಮುಸ್ಲಿಮರ ಧರ್ಮಗ್ರಂಥ ಕುರ್ ಆನ್ ನ್ನು ಸುಟ್ಟು ಹಾಕಲು ಬಲಪಂಥೀಯರು ನಡೆಸಿದ ರ್ಯಾಲಿಯಲ್ಲಿ ಘರ್ಷಣೆ ಸಂಭವಿಸಿದ್ದು, ಹಲವು ಪೊಲೀಸರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ 10 ಮಂದಿಯನ್ನು ಬಂಧಿಸಲಾಗಿದೆ. ಮುಸ್ಲಿಂ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಬೇಕಿದ್ದ ಪ್ರಮುಖ ಡ್ಯಾನಿಷ್ ರಾಜಕಾರಣಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಾಲ್ಮೋ ನಗರದಲ್ಲಿ ಪ್ರತಿಭಟನಕಾರರು ಪೊಲೀಸರತ್ತ ತಲ್ಲು ತೂರಾಟ ನಡೆಸಿದ್ದು, ರಸ್ತೆ ಮೇಲೆ ಟೈರುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ತಡರಾತ್ರಿ ವೇಳೆ ಸಂಷರ್ಘ ತೀವ್ರ ಸ್ವರೂಪ ಪಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದಕ್ಕೂ ಮುನ್ನ ಸುಮಾರು 300 ಮಂದಿ ದುಷ್ಕರ್ಮಿಗಳು ಕುರ್ ಆನ್ ನ್ನು ಸುಟ್ಟುಹಾಕಿದ್ದರು ಎಂದು ಪೊಲೀಸ್ ವಕ್ತಾರ ರಿಚರ್ಡ್ ಲ್ಯುಂಡ್‍ ಕ್ವಿಸ್ಟ್ ಹೇಳಿದ್ದಾರೆ. ಸುಮಾರು 10-20 ಮಂದಿ ಪ್ರತಿಭಟನಕಾರರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ವಕ್ತಾರ ಪ್ಯಾಟ್ರಿಕ್ ಫೋರ್ಸ್ ವಿವರಿಸಿದ್ದಾರೆ.

ಬಲಪಂಥೀಯ ಡ್ಯಾನಿಷ್ ಪಕ್ಷ ಹಾರ್ಡ್ ಲೈನ್ ನ ಮುಖಂಡ ರಸ್‍ಮಸ್ ಪಲೂಡನ್, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಲು ಮಾಲ್ಮೋಗೆ ಬರಬೇಕಿತ್ತು. ಮುಸ್ಲಿಮರ ಪ್ರಾರ್ಥನೆಯ ದಿನವೇ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ವಿವಾದಿತ ರಾಜಕಾರಣಿಯನ್ನು ಎರಡು ವರ್ಷಗಳ ಕಾಲ ಸ್ವೀಡನ್ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದರು. ಬಳಿಕ ಅವರನ್ನು ಮಾಲ್ಮೋ ಬಳಿ ಬಂಧಿಸಲಾಯಿತು.

ಅವರು ಸ್ವೀಡನ್‍ ನಲ್ಲಿ ಕಾನೂನು ಉಲ್ಲಂಘಿಸುವ ಶಂಕೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಮಾಲ್ಮೋ ಪೊಲೀಸ್ ವಕ್ತಾರ ಕ್ಯಾಲ್ ಪ್ರೆಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News