×
Ad

ಜೊಕೊವಿಕ್‌ರ ಹೊಸ ಟೆನಿಸ್ ಆಟಗಾರರ ಸಂಘಕ್ಕೆ ಬೋಪಣ್ಣ, ಸುಮಿತ್ ಸೇರ್ಪಡೆ

Update: 2020-08-30 23:19 IST

ಹೊಸದಿಲ್ಲಿ, ಆ.30: ಭಾರತದ ಅಗ್ರ ಟೆನಿಸ್ ತಾರೆಗಳಾದ ರೋಹನ್ ಬೋಪಣ್ಣ ಮತ್ತು ಸುಮಿತ್ ನಾಗಲ್ ಅವರು ರವಿವಾರ ನೊವಾಕ್ ಜೊಕೊವಿಕ್ ಮತ್ತು ವಾಸೆಕ್ ಪೋಸ್ಪಿಸಿಲ್ ನೇತೃತ್ವದ ವೃತ್ತಿಪರ ಟೆನಿಸ್ ಪ್ಲೇಯರ್ಸ್ ಅಸೋಸಿಯೇಶನ್ (ಪಿಟಿಪಿಎ) ಗೆ ಸೇರಿದ್ದಾರೆ.

 ಹೊಸ ಸಂಘ ಸೇರಲು ರೋಹನ್ ಬೋಪಣ್ಣ ಮತ್ತು ಸುಮಿತ್ ನಾಗಲ್ ದಾಖಲೆ ಪತ್ರಗಳಿಗೆ ಸಹಿ ಹಾಕಿದ್ದಾರೆ. ಹೊಸ ಸಂಘ ರಚನೆಯ ಬಗ್ಗೆ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಟೀಕಿಸಿದ್ದಾರೆ.

ಎಟಿಪಿ ಟೂರ್‌ನಲ್ಲಿ ಶನಿವಾರ ಪ್ರಕ್ಷುಬ್ಧ ದಿನವಾಗಿತ್ತು. ಏಕೆಂದರೆ ಜೊಕೊವಿಕ್ ಮತ್ತು ಪೋಸ್ಪಿಸಿಲ್ ಎಟಿಪಿ ಪ್ಲೇಯರ್ಸ್ ಕೌನ್ಸಿಲ್‌ನಿಂದ ತಮ್ಮನ್ನು ಬೇರ್ಪಡಿಸುವ ಮೂಲಕ ಪ್ರತ್ಯೇಕ ಆಟಗಾರರ ಪ್ರಾತಿನಿಧ್ಯ ಮಂಡಳಿಯನ್ನು ರಚಿಸಲು ಪ್ರಯತ್ನಿಸಿದರು. ಆಟಗಾರರಲ್ಲಿ ಇ-ಮೇಲ್‌ನಲ್ಲಿ ಬೆಂಬಲವನ್ನು ಕೋರಿದರು. ಆಟಗಾರರ ಹಿತಾಸಕ್ತಿಗಳನ್ನು ಉತ್ತೇಜಿಸಲು, ರಕ್ಷಿಸಲು ಮತ್ತು ಪ್ರತಿನಿಧಿಸಲು ಪಿಟಿಪಿಎ ಅಗತ್ಯವಿದೆ. ಇದು ಟೆನಿಸ್‌ನ ಭವಿಷ್ಯವನ್ನು ರಕ್ಷಿಸುತ್ತದೆ ಎಂದು ಹೇಳಿದರು.

 ಜೊಕೊವಿಕ್ ಟೆನಿಸ್ ಕೋರ್ಟ್‌ನಲ್ಲಿ ಒಟ್ಟು 64 ಆಟಗಾರರನ್ನು ಹೊಂದಿರುವ ಛಾಯಾಚಿತ್ರವನ್ನು ಪೋಸ್ಟ್ ಮಾಡಿದರು. ‘‘ಇದು 1972ರ ಬಳಿಕ ರಚನೆಯಾದ ಮೊದಲ ಆಟಗಾರರ ಸಂಘ ಎಂದು ಜೊಕೊವಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News