×
Ad

20 ಕೊರೋನ ವಾರಿಯರ್ಸ್ ಗೆ ಕೆಂಪೇಗೌಡ ಪ್ರಶಸ್ತಿ

Update: 2020-08-30 23:47 IST

ಬೆಂಗಳೂರು, ಆ. 30: ಮುಂದಿನ ತಿಂಗಳ ಎರಡನೆ ತಾರೀಕಿನಂದು ನಡೆಯಲಿರುವ ಕೆಂಪೇಗೌಡ ದಿನಾಚರಣೆಯಲ್ಲಿ 20 ಕೊರೋನ ವಾರಿಯರ್ಸ್ ಗೆ ಕೆಂಪೇಗೌಡ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ಆಯ್ಕೆ ನಾಳೆ(ಆ.31) ನಡೆಯಲಿದೆ.

ಅದಕ್ಕಾಗಿ ಮೇಯರ್ ಗೌತಮ್ ಕುಮಾರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಆಗಿದೆ. ಈ ಸಮಿತಿಯಲ್ಲಿ ಉಪಮೇಯರ್ ರಾಮ್ ಮೋಹನ್ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿಪಕ್ಷ ನಾಯಕ ವಾಜಿದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷೆ ಅರುಣಾ ರವಿ ಇದ್ದಾರೆ. ಅಲ್ಲದೇ ಆಯಾ ಕ್ಷೇತ್ರದ ಅಧಿಕಾರಿಗಳ ಸಲಹೆ ಪಡೆದು 20 ಕೊರೋನ ವಾರಿಯರ್ಸ್ ಗಳನ್ನು ಆಯ್ಕೆ ಮಾಡಲಿದ್ದಾರೆ. ಪ್ರಶಸ್ತಿಗೆ ಆಯ್ಕೆ ಆಗುವವರಿಗೆ 50 ಸಾವಿರ ರೂ. ಹಾಗೂ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News