ಸೆ.2ರಿಂದ ಸಿಇಟಿ ದಾಖಲಾತಿಗಳ ಅಪ್‍ಲೋಡ್

Update: 2020-09-01 18:07 GMT

ಬೆಂಗಳೂರು, ಸೆ. 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‍ಗಳ ಸೀಟಿಗಾಗಿ ಸೆ.2ರಿಂದ ದಾಖಲಾತಿ ಅಪ್‍ಲೋಡ್ ಮಾಡಲಿದ್ದಾರೆ.

ಸೆ.2 ಹಾಗೂ 3ರಂದು 1ರಿಂದ 2 ಸಾವಿರ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡಲಿದ್ದಾರೆ. ಸೆ.27ರವರೆಗೂ ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್ ಆಧಾರದಲ್ಲಿ ದಾಖಲಾತಿ ಅಪ್‍ಲೋಡ್ ಮಾಡಲಿದ್ದಾರೆ. ದಾಖಲಾತಿಗಳನ್ನು ಹೇಗೆ ಅಪ್‍ಲೋಡ್ ಮಾಡಬೇಕು ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಪ್ರಾಧಿಕಾರದಿಂದ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

2020ನೇ ಸಾಲಿನ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಗೆ ಸೀಟು ಹಂಚಿಕೆಯು ಅರ್ಹ ಅಭ್ಯರ್ಥಿಗಳು ಅಪ್‍ಲೋಡ್ ಮಾಡುವ ದಾಖಲೆಗಳು ಅಥವಾ ಪ್ರಮಾಣ ಪತ್ರದ ಮೇಲೆ ಅವಲಂಬಿತವಾಗಿರುತ್ತದೆ. ಕೊರೋನ ಹಿನ್ನೆಲೆಯಲ್ಲಿ ಯಾವುದೇ ವಿದ್ಯಾರ್ಥಿ ಸಹಾಯವಾಣಿ ಕೇಂದ್ರ ಅಥವಾ ಕೇಂದ್ರ ಕಚೇರಿಗೆ ಬಂದು ದಾಖಲಾತಿ ನೀಡುವಂತಿಲ್ಲ. ದಾಖಲಾತಿ ಪರಿಶೀಲನೆ ಆನ್‍ಲೈನ್ ಮೂಲಕವೇ ನಡೆಯಲಿದೆ. ಅಭ್ಯರ್ಥಿಗಳು ತಮಗೆ ಸೂಚಿಸಿರುವ ದಿನಾಂಕದಂದು ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಅಪ್‍ಲೋಡ್ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ವೆಬ್‍ಸೈಟ್‍ನಲ್ಲಿ ನಿರ್ದಿಷ್ಟ ಲಿಂಕ್ ನೀಡಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News