×
Ad

ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ: ಹೊಸದಿಲ್ಲಿ ಮೂಲದ ವ್ಯಕ್ತಿಯ ಬಂಧನ

Update: 2020-09-04 20:28 IST

ಬೆಂಗಳೂರು, ಸೆ.4: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಕ ಹೊಸದಿಲ್ಲಿ ಮೂಲದ ವಿರೇನ್ ಖನ್ನಾ ಎಂಬಾತನನ್ನು ಸಿಸಿಬಿ ತನಿಖಾಧಿಕಾರಿಗಳು ಬಂಧಿಸಿ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹೊಸದಿಲ್ಲಿಗೆ ತೆರಳಿ ತಲೆಮರೆಸಿಕೊಂಡಿದ್ದ ಈತನನ್ನು ಸಿಸಿಬಿ ಪೊಲೀಸರ ವಿಶೇಷ ತಂಡವೊಂದು ತೆರಳಿ ಬಂಧಿಸಿ ಶುಕ್ರವಾರ ಬೆಂಗಳೂರಿಗೆ ಕರೆತಂದಿದ್ದಾರೆ.

ಟೆಕ್ಕಿಯಾಗಿದ್ದ ಬಂಧಿತ ಆರೋಪಿ ವಿರೇನ್ ಖನ್ನಾ, ಬೆಂಗಳೂರು, ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ದುಬಾರಿ ಬೆಲೆಯ ಹೋಟೆಲ್‍ಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದ. ಅಲ್ಲಿಗೆ ಬರುವ ಸಾಫ್ಟ್ ವೇರ್ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಹಾಗೂ ವಿದೇಶಿಗರಿಗೆ ಡ್ರಗ್ಸ್ ಒದಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ರವಿಶಂಕರ್ ನ ಮೊಬೈಲ್‍ನಲ್ಲಿದ್ದ ವಿಡಿಯೋಗಳನ್ನು ಆಧರಿಸಿ ವಿರೇನ್ ಖನ್ನಾನನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News