ಮುಹಮ್ಮದ್ ಕಾಪು

Update: 2020-09-04 15:22 GMT

ಉಡುಪಿ, ಸೆ.4: ಇನ್ನಂಜೆ ಮಡುಂಬು ನಿವಾಸಿ ಎಚ್.ಮುಹಮ್ಮದ್ ಕಾಪು (64) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಉಡುಪಿ ತಾಲೂಕು ಕಚೇರಿಯಲ್ಲಿ ಡಿ ಗ್ರೂಪ್ ನೌಕರರಾಗಿ ಕರ್ತವ್ಯ ನಿರ್ವಹಿಸಿ ನಾಲ್ಕು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಕಾಪು ಪೊಲಿಪು ಜಾಮೀಯ ಮಸೀದಿ ಹಾಗೂ ಖುವ್ವತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿ ಯೇಶನ್‌ನ ವಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಎಸ್‌ವೈಎಸ್, ಎಸ್‌ಎಂಎ ಹಾಗೂ ಸುನ್ನೀ ಸಂಘಟನೆಗಳ ನಾಯಕರೂ ಹಾಗೂ ಸಮಾಜ ಸೇವಕರೂ ಆದ ಇವರು, ಪ್ರಸ್ತುತ ಕಾಪು ಭರತ್ ‌ನಗರದ ಮಹಾಜನ ಮಿತ್ರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಪತ್ನಿ, ಏಳು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ