ಮಾದಕ ವಸ್ತು ಮಾರಾಟ ಆರೋಪ: ವಿದೇಶಿಗರ ಬಂಧನ
Update: 2020-09-04 21:43 IST
ಬೆಂಗಳೂರು, ಸೆ.4: ಮಾದಕ ವಸ್ತುಗಳ ಮಾರಾಟ ಆರೋಪದಡಿ ವಿದೇಶಿ ಪ್ರಜೆಗಳನ್ನು ಇಲ್ಲಿನ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ದೇಶದ ಕಿಜ್ ಪ್ರಿನ್ಸ್, ನೈಜ್‍ವೇ ಎಜಿಕಿ ಮತ್ತು ಐವರಿ ದೋಸ್ಸಾ ಕೋಸ್ಟಾ ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಕೋಣನಕುಂಟೆ ವ್ಯಾಪ್ತಿಯ ಜೆಪಿ ನಗರ, 8ನೆ ಹಂತ, ಕೊತ್ತನೂರು ಗ್ರಾಮದ ಅರಳಿಮರದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಆರೋಪಿಗಳು ಸಿಕ್ಕಿಬಿದಿದ್ದಾರೆ. ಬಂಧಿತರಿಂದ ಕೊಕೈನ್, 2.850 ಗ್ರಾಂ ಎಂಡಿಎಂಎ ಮಾದಕ ವಸ್ತುಗಳು, 5 ಮೊಬೈಲ್, 2 ಸಾವಿರ ರೂ. ನಗದು ಜಪ್ತಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.