×
Ad

ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ: ಅಪಾರ ಪ್ರಮಾಣದ ಗಾಂಜಾ ಜಪ್ತಿ

Update: 2020-09-05 22:26 IST

ಬೆಂಗಳೂರು, ಸೆ.5:ಸ್ಯಾಂಡಲ್‍ವುಡನಲ್ಲಿ ಡ್ರಗ್ಸ್ ದಂಧೆ ಆರೋಪ ಪ್ರಕರಣದ ತನಿಖೆ ಬಿರುಸುಗೊಂಡಿದ್ದು, ಮತ್ತೊಂದೆಡೆ ನಗರದ ಪಶ್ಚಿಮ ವಿಭಾಗದ ಪೊಲೀಸರು 12 ಪ್ರಕರಣಗಳಲ್ಲಿ 15 ಜನರನ್ನು ಬಂಧಿಸಿ ಒಟ್ಟು 5.916ಕೆಜಿ ಗಾಂಜಾ, 25,080 ರೂ ನಗದು, ಒಂದು ಕಾರು, ಬೈಕ್ ಜಪ್ತಿ ಮಾಡಿದ್ದಾರೆ.

ಸುನಿಲ್ ಕುಮಾರ್(37), ರಘು(27), ನಾಗರಾಜ್(35), ಹಾದ್(27), ರವಿ(19), ಶರೀಫ್(25), ಸಲ್ಮಾನ್(23), ಇಮ್ರಾನ್ (22), ಇಮ್ರಾನ್ ಖಾನ್(26), ಮುನಿಯಾಂಡಿ(22), ಮಂಜುನಾಥ(19), ಜ್ಯೋತಿ(32), ರಾಜೇಶ್ವರಿ (45) ಮತ್ತು ಯಾಜ್ ಶೇಖ್(25) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಮಾಗಡಿ ರಸ್ತೆ ಠಾಣಾ ಪೊಲೀಸರು ಸೆ.5ರಂದು ನಡೆಸಿದ ಪ್ರತ್ಯೇಕ ಎರಡು ಕಾರ್ಯಾಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದರೆ, ಜ್ಞಾನಭಾರತಿ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ರಾಜರಾಜೇಶ್ವರಿನಗರ ಠಾಣಾ ಪೊಲೀಸರು ಸೆ.1 ಮತ್ತು ಸೆ.4ರಂದು ದಾಳಿ ನಡೆಸಿ ಎರಡು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಚಾಮರಾಜಪೇಟೆ ಠಾಣಾ ಪೊಲೀಸರು ಸೆ.4 ಮತ್ತು 5ರಂದು ನಡೆಸಿದ ಮೂರು ದಾಳಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.

ಅದೇ ರೀತಿ, ಚಂದ್ರ ಲೇಔಟ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದರೆ, ಜೆ.ಜೆ.ನಗರ, ಬಸವೇಶ್ವರ ನಗರ ಠಾಣಾ ಪೊಲೀಸರು ತಲಾ ಒಬ್ಬೊಬ್ಬರನ್ನು, ಕಾಟನ್‍ಪೇಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News