ಚೆಂಡಿಗೆ ಸ್ಯಾನಿಟೈಸರ್ ಸವರಿದ ಆಸ್ಟ್ರೇಲಿಯದ ವೇಗಿಯ ಅಮಾನತು

Update: 2020-09-06 06:50 GMT

  ಮೆಲ್ಬೋರ್ನ್, ಸೆ.6: ಕಳೆದ ತಿಂಗಳು ಇಂಗ್ಲೀಷ್ ಕೌಂಟಿ ಪಂದ್ಯದ ವೇಳೆ ಕ್ರಿಕೆಟ್ ಚೆಂಡಿಗೆ ಹ್ಯಾಂಡ್ ಸ್ಯಾನಿಟೈಸರ್‌ನ್ನು ಸವರಿದ್ದ ಆಸ್ಟ್ರೇಲಿಯದ ಹಿರಿಯ ವೇಗದ ಬೌಲರ್‌ಮಿಚಲ್ ಕ್ಲೇಡನ್‌ರನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ಅಮಾನತುಗೊಳಿಸಿದೆ.

37ರ ಹರೆಯದ ಕ್ಲೇಡನ್‌ರನ್ನು ಅಮಾನತುಗೊಳಿಸಿರುವ ಸಸ್ಸೆಕ್ಸ್ ಕೌಂಟಿ ತಂಡವು ಕ್ರಿಕೆಟ್ ಚೆಂಡಿಗೆ ಹ್ಯಾಂಡ್ ಸ್ಯಾನಿಟೈಸರ್ ಸವರಿದ ಘಟನೆಯ ತನಿಖೆ ಮುಂದುವರಿಸಲು ಅನುಮತಿ ನೀಡಲಾಗಿದೆ.

ಕಳೆದ ತಿಂಗಳು ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದಲ್ಲಿ ನಡೆದಿರುವ ಈ ಘಟನೆಯ ಕುರಿತು ಇಸಿಬಿ ತನಿಖೆ ನಡೆಸಲು ಮುಂದಾಗಿದೆ. ಈ ಪಂದ್ಯದಲ್ಲಿ ಕ್ಲೇಡನ್ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಕೋವಿಡ್-19 ಬಿಕ್ಕಟ್ಟಿನ ಬಳಿಕ ಕಟ್ಟುನಿಟ್ಟಿನ ಆರೋಗ್ಯ ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದೆ.ಆಟಗಾರರು ಚೆಂಡಿನ ಹೊಳಪು ಹೆಚ್ಚಿಸಲು ಲಾವಾರಸ ಬಳಸುವುದನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News