ಅಬೂಬಕ್ಕರ್ ಮದನಿ

Update: 2020-09-06 17:33 GMT

ಉಳ್ಳಾಲ : ಸಯ್ಯಿದ್ ಮದನಿ ದರ್ಗಾ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ  ಒಂಬತ್ತುಕೆರೆ ಮದ್ರಸಾ ಸದರ್ ಮುಅಲ್ಲಿಂ ಅಬೂಬಕ್ಕರ್ ಮದನಿ ಮಡಿಕೇರಿ(54) ಅವರು ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.

ಮಂಚಿಲ ಮಸೀದಿ ಯಲ್ಲಿ ಮೂರು ವರ್ಷ ಖತೀಬ್ ಆಗಿ ಸೇವೆ ಸಲ್ಲಿಸಿದ್ದ ಅವರು ಕೆಲವು ವರ್ಷ ವಿದೇಶ ದಲ್ಲಿ ಉದ್ಯೋಗ ದಲ್ಲಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಫಾರೂಕ್ ಉಳ್ಳಾಲ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ