ಬೈಕ್ ಮೇಲೆ 'ಪೊಲೀಸ್' ಬರಹ: ಯುವಕನಿಗೆ ದಂಡ
Update: 2020-09-07 21:39 IST
ಬೆಂಗಳೂರು, ಸೆ.7: ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಮೇಲೆ ಪೊಲೀಸ್ ಎಂದು ಬರೆಸಿಕೊಂಡಿದ್ದ ಯುವಕನೋರ್ವನನ್ನು ಸಂಚಾರ ಪೊಲೀಸರು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಕುಮಾರ್ ಎಂಬಾತ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಈ ವೇಳೆ ತನ್ನ ಬೈಕ್ ಮೇಲೆ ಪೊಲೀಸ್ ಎಂದು ಬರೆಸಿಕೊಂಡಿದ್ದ.
ಈ ಬಗ್ಗೆ ಮಾಹಿತಿ ಪಡೆದ ಕೆಆರ್ ಪುರಂ ಸಂಚಾರ ಪೊಲೀಸರು, ಆತ ಇಲ್ಲಿನ ಕೆರೆ ರಸ್ತೆ ಬಳಿ ಓಡಾಟ ನಡೆಸುತ್ತಿದ್ದ ವೇಳೆ ಬೈಕ್ ನಾಮಫಲಕದಲ್ಲಿ ಸಂಖ್ಯೆ ಇಲ್ಲದಿರುವುದನ್ನು ಕಂಡು 2 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.