×
Ad

ಬುಲೇವಾರ್ಡ್ ಉದ್ಯಾನಕ್ಕೆ ಮಾಜಿ ಶಾಸಕ ವಿಜಯ ಕುಮಾರ್ ಹೆಸರು ನಾಮಕರಣ

Update: 2020-09-07 22:59 IST

ಬೆಂಗಳೂರು, ಸೆ.7: ನವೀಕರಣಗೊಂಡಿರುವ ಜಯನಗರದ ಬುಲೇವಾರ್ಡ್ ಉದ್ಯಾನವನಕ್ಕೆ ಕ್ಷೇತ್ರದ ಮಾಜಿ ಶಾಸಕ ದಿ.ಬಿ.ಎನ್. ವಿಜಯ ಕುಮಾರ್ ಹೆಸರನ್ನಿಡಲಾಯಿತು. ಇದೇ ಸಂದರ್ಭದಲ್ಲಿ ನವೀಕರಿಸಿದ ಉದ್ಯಾನವನ ಲೋಕಾರ್ಪಣೆ ಹಾಗೂ ಮಾಜಿ ಶಾಸಕರ ಪುತ್ಥಳಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅನಾವರಣಗೊಳಿಸಿದರು.

ಪಟ್ಟಭಿರಾಮನಗರ ವಾರ್ಡ್‍ನ ಜಯನಗರ 4ನೇ ಬ್ಲಾಕ್‍ನಲ್ಲಿ ನವೀಕರಣಗೊಂಡಿರುವ ಉದ್ಯಾನವನವನ್ನು ಬಿಬಿಎಂಪಿ ಪಿ-3396ರ ಅಭಿವೃದ್ಧಿ ಕಾಮಗಾರಿ ಯೋಜನೆ ಅಡಿಯಲ್ಲಿ  ಕೆ.ಆರ್.ಐ.ಡಿ.ಎಲ್.ನಿಂದ ನಿರ್ಮಿಸಲಾಗಿದೆ.

2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಉದ್ಯಾನದಲ್ಲಿ ಮಾಜಿ ಶಾಸಕ ದಿ.ಬಿ.ಎನ್. ವಿಜಯ ಕುಮಾರ್‍ರ ಪುತ್ಥಳಿ ಸೇರಿದಂತೆ 256 ಮೀ. ಉದ್ದದ ಪಾದಚಾರಿ ಮಾರ್ಗ, ಹಿರಿಯ ನಾಗರೀಕರಿಗೆ ವ್ಯಾಯಾಮ ಉಪಕರಣ, ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News