ಐಎಂಎ ಬಹುಕೋಟಿ ಹಗರಣ: ಅಧಿಕಾರಿಗಳಿಬ್ಬರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ ಸಿಬಿಐ

Update: 2020-09-08 12:20 GMT

ಬೆಂಗಳೂರು, ಸೆ.8: ಐಎಂಎ ಬಹುಕೋಟಿ ಹಗರಣದ ತನಿಖೆಯನ್ನು ನಡೆಸುತ್ತಿರುವ ಸಿಬಿಐ ಇಬ್ಬರು ಸರಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯಾಗಿದ್ದ ಎಲ್.ಸಿ. ನಾಗರಾಜ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಎನ್. ಮಂಜುನಾಥ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಜೂನ್ ತಿಂಗಳಿನಲ್ಲಿ ಐಎಎಸ್ ಅಧಿಕಾರಿ ಬಿ.ವಿಜಯ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಉಳಿದ ಇಬ್ಬರು ಆರೋಪಿಗಳ ವಿರುದ್ಧ ಈಗ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್‍ನಿಂದ ಇಬ್ಬರು ಲಂಚ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಐಎಂಎ ಪರವಾಗಿ ವರದಿ ನೀಡಲು ಎಲ್.ಸಿ.ನಾಗರಾಜ್ 4.5 ಕೋಟಿ ರೂ. ಲಂಚ ಪಡೆದಿದ್ದಾರೆ. ಎಲ್.ಸಿ.ನಾಗರಾಜ್ ಮತ್ತು ಮನ್ಸೂರ್ ಖಾನ್ ಪರಿಚಯ ಮಾಡಿಸಿದ್ದ ಗ್ರಾಮ ಲೆಕ್ಕಾಧಿಕಾರಿ ಎನ್.ಮಂಜುನಾಥ್ 10 ಲಕ್ಷ ಲಂಚ ಪಡೆದಿದ್ದಾರೆ ಎಂದು ಸಿಬಿಐ ಹೇಳಿದೆ ಎನ್ನಲಾಗಿದೆ.

ಐಎಂಎ ಹಗರಣದಲ್ಲಿ ಕಂಪನಿಯ ಪರವಾಗಿ ವರದಿ ನೀಡುವ ವಿಷಯದಲ್ಲಿ ಎಲ್.ಸಿ.ನಾಗರಾಜ್, ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ.ವಿಜಯ್‍ ಶಂಕರ್, ಗ್ರಾಮ ಲೆಕ್ಕಿಗ ಎನ್.ಮಂಜುನಾಥ್ ಆರೋಪಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News