ಸೆ.21ರಿಂದ ಸ್ನಾತಕೋತ್ತರ ಪರೀಕ್ಷೆ ಆರಂಭ

Update: 2020-09-08 17:21 GMT

ಬೆಂಗಳೂರು, ಸೆ.8: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2019-20 ನೇ ಸಾಲಿನ ಸ್ನಾತಕೋತ್ತರ(4ನೇ ಸೆಮಿಸ್ಟರ್) ಪರೀಕ್ಷೆ ಸೆ.21 ರಿಂದ ನಡೆಯಲಿದೆ.

ಎಂಎಫ್‍ಎ, ಎಂಎಸ್‍ಡಬ್ಲ್ಯೂ, ಎಂ.ಇಡಿ, ಎಂಬಿಎ, ಬಿಪಿ ಕೋರ್ಸ್ ಗಳ ಪರೀಕ್ಷೆಗಳು ಹಾಗೂ 4 ನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ 2ನೆ ಸೆಮಿಸ್ಟರ್ ನ ಉಳಿದ ವಿಷಯಗಳ ಪರೀಕ್ಷೆಗಳು ಸೆ.21 ರಿಂದ ಪ್ರಾರಂಭಗೊಳ್ಳುತ್ತವೆ.

ಪರೀಕ್ಷೆ ವೇಳಾಪಟ್ಟಿಯನ್ನು ವಿವಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುತ್ತದೆ. ಸಂಬಂಧಿಸಿದ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಕೋವಿಡ್ ಸಂಬಂಧ ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸುವ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆರೋಗ್ಯ ವಿಚಾರವನ್ನು ಪ್ರಮುಖವಾಗಿ ಪರಿಗಣಿಸಿಕೊಂಡು ತಪ್ಪದೆ ಎಚ್ಚರಿಕಾ ಕ್ರಮಗಳನ್ನು ವಿದ್ಯಾರ್ಥಿಗಳು, ಕಾಲೇಜುಗಳ ಸಿಬ್ಬಂದಿ ವರ್ಗ ಪಾಲಿಸಲು ವಿವಿ ಕುಲ ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News