ಮಾದಕ ವಸ್ತು ಮಾರಾಟ ಆರೋಪ: ಹೊರ ರಾಜ್ಯದ ಐವರ ಬಂಧನ
Update: 2020-09-10 21:53 IST
ಬೆಂಗಳೂರು, ಸೆ.10: ಹೊರ ರಾಜ್ಯಗಳಿಂದ ಗಾಂಜಾ ಮಾರಲು ಬಂದಿದ್ದ ಐವರು ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ ಎರಡು ಲಕ್ಷ ರೂ.ಬೆಲೆ ಬಾಳುವ 10 ಕೆಜಿ 270 ಗ್ರಾಂ ಗಾಂಜಾ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಒಡಿಶಾ ರಾಜ್ಯದ ಅಮನ್ ಪ್ರಧಾನ್(23), ಆಂಧ್ರಪ್ರದೇಶದ ಥರಪಟ್ಲಾ(25), ದುರ್ಗಪ್ರಸಾದ್(23), ಅಭಿಷೇಕ್(23), ಉದಯ್(24) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು ತಲಘಟ್ಟಪುರ ವ್ಯಾಪ್ತಿಯ ಆವಲಹಳ್ಳಿ ಎಚ್.ಎಂ.ವರ್ಲ್ಡ್ ಸಿಟಿ ಅಪಾರ್ಟ್ ಮೆಂಟ್ ಎದುರು ಖಾಲಿ ಜಾಗದಲ್ಲಿ ಬ್ಯಾಗ್‍ಗಳಲ್ಲಿ ಮಾದಕ ವಸ್ತು ಇಟ್ಟುಕೊಂಡು ಮಾರುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.
ಗಾಂಜಾ ಪ್ರಕರಣಗಳನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡ ಹಗಲಿರುಳು ಶ್ರಮಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.