ಕಡಿಮೆ ಸಂಬಳ ಪಾವತಿ ಆರೋಪ: ಕಂಪೆನಿ ವಿರುದ್ಧ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ

Update: 2020-09-12 13:04 GMT

ಬೆಂಗಳೂರು, ಸೆ.12: ಕಡಿಮೆ ಸಂಬಳ ಪಾವತಿಸಿದ ಕಂಪೆನಿ ವಿರುದ್ಧ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸಿ, ಭರವಸೆ ನೀಡಿದ ಹಣವನ್ನು ನೀಡುವಂತೆ ಒತ್ತಾಯಿಸಿದರು.

ಪೀಣ್ಯದ ರಾಜಗೋಪಾಲ ನಗರದಲ್ಲಿರುವ ಶರ್ಟ್ ಗಾರ್ಮೆಂಟ್ಸ್ ಕಂಪನಿಯು ತಮ್ಮ ನೌಕರರಿಗೆ 10 ಸಾವಿರ ರೂ. ಎಂದು ಭರವಸೆ ನೀಡಿ ಬದಲಿಗೆ 4 ಸಾವಿರ ರೂ. ಮಾತ್ರ ಸಂಬಳ ನೀಡಿದೆ ಎಂದು ಕಂಪನಿ ವಿರುದ್ಧ ನೌಕರರು ಆರೋಪಿಸಿದ್ದಾರೆ.

ಕೊರೋನ ಸಮಯದಲ್ಲಿ ಮಾಸ್ಕ್, ಪಿಪಿಇ ಕಿಟ್ ತಯಾರಿಕೆಗೆ ನೌಕರರನ್ನು ಬಳಸಿಕೊಂಡಿದ್ದು ಬಳಿಕ ಅವುಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವದರಿಂದ ನಮ್ಮನ್ನು ಬೀದಿಗೆ ತಳಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

ರಾಜಗೋಪಾಲ ನಗರದಲ್ಲಿರುವ ಶರ್ಟ್ ಗಾರ್ಮೆಂಟ್ಸ್ನಲ್ಲಿ ಸುಮಾರು 400ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಕಡಿಮೆ ವೇತನ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೊರೋನ ಸಂಕಷ್ಟ ಸಂದರ್ಭದಲ್ಲಿ ಜೀವನ ನಡೆಸಲು ಕಷ್ಟವಾಗಿದೆ. ಇವರು ಕೊಡುತ್ತಿರುವ ನಾಲ್ಕು ಸಾವಿರದಲ್ಲಿ ಜೀವನ ನಡೆಸುವುದು ಹೇಗೆ ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News