ಆ್ಯಂಬುಲೆನ್ಸ್ ನಲ್ಲಿ ತೆರಳಿದ್ದ ಕೊರೋನ ಸೋಂಕಿತೆ ನಾಪತ್ತೆ ಪ್ರಕರಣ: ಪೊಲೀಸರಿಂದ ಸ್ಪಷ್ಟನೆ

Update: 2020-09-13 15:13 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 13: ಆ್ಯಂಬುಲೆನ್ಸ್ ಸಿಬ್ಬಂದಿಯೊಂದಿಗೆ ತೆರಳಿದ್ದ ಕೊರೋನ ಸೋಂಕಿತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂಬ ಪ್ರಕರಣಕ್ಕೆ ಬೆಂಗಳೂರು ಪೊಲೀಸರು ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಗಂಡ-ಹೆಂಡತಿ ನಡುವೆ ಜಗಳ ನಡೆದು ನಡೆದು ಮಹಿಳೆ ಸ್ವ ಇಚ್ಛೆಯಿಂದ ಪರಿಚಿತ ವ್ಯಕ್ತಿಯೊಬ್ಬನ ಸಹಾಯದಿಂದ ಮನೆ ಬಿಟ್ಟು ತೆರಳಿರುವುದು ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ. ಮಹಿಳೆ ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣಕ್ಕೂ ಕೊರೋನ ಪರೀಕ್ಷೆ ನಡೆಸುವ ಬಿಬಿಎಂಪಿ, ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳಿಗೂ ಯಾವುದೇ ಸಂಬಂಧವಿಲ್ಲ. ಜನರು ಯಾವುದೇ ಆತಂಕ, ಮುಜುಗರಕ್ಕೆ ಒಳಗಾಗದೇ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

ಘಟನೆ ವಿವರ: ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೋನ ಪರೀಕ್ಷೆ ಮಾಡಿಸಿಕೊಂಡಾಗ ಮಹಿಳೆಗೆ ಪಾಸಿಟೀವ್ ಬಂದಿತ್ತು, ಆಕೆ ಆಂಬ್ಯುಲೆನ್ಸ್ ನಲ್ಲಿ ತೆರಳಿದ್ದಳು. ಬಳಿಕ ಕಾಣೆಯಾಗಿದ್ದಳು, ನ.4ರಂದು ನಡೆದ ಘಟನೆ ಬಗ್ಗೆ ಅಂದೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗಂಡ ಮತ್ತು ಹೆಂಡತಿ ನಡುವೆ ಗಲಾಟೆ ನಡೆದಿತ್ತು. ಮಹಿಳೆ ಮನೆಯಿಂದ ಹೊರ ಹೋಗಲು ಬಯಸಿದ್ದಳು. ಅದಕ್ಕಾಗಿ ಸ್ನೇಹಿತನ ಸಹಾಯ ಪಡೆದಿದ್ದಳು. ನ.8ರಂದು ಆಕೆ ಮಾಡಿದ ದೂರವಾಣಿ ಕರೆಯನ್ನು ತನಿಖಾಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ಮಹಿಳೆಯ ಧ್ವನಿಯನ್ನು ದೂರು ನೀಡಿದ ಪತಿ ಗುರುತಿಸಿದ್ದಾರೆ. ಮಹಿಳೆ ಸುರಕ್ಷಿತವಾಗಿದ್ದು, ಸಂಸಾರದ ತೊಂದರೆಯನ್ನು ಬಗೆಹರಿಸಿಕೊಳ್ಳುವೆ ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News