×
Ad

ಸಿಲಿಕಾನ್ ಸಿಟಿಯಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ

Update: 2020-09-13 23:37 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.13 : ಸಿಲಿಕಾನ್ ಸಿಟಿಯಲ್ಲಿ ರವಿವಾರದ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಹೆಚ್ಚಿದ್ದವುಗಳ ಬೆಲೆ ಅಧಿಕಗೊಂಡಿದ್ದು, ತರಕಾರಿಗಳ ಬೆಲೆ ಗಗನಕ್ಕೇರಿದೆ.

ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭವಾದರೆ ತರಕಾರಿ ಬೆಲೆ ಕುಸಿತ ಕಾಣುವ ನಿರೀಕ್ಷೆಯಲ್ಲಿ ಗ್ರಾಹಕರಿದ್ದರು. ಆದರೆ, ಸಗಟು ಮಾರುಕಟ್ಟೆಯಲ್ಲಿಯೂ ಕೆಲ ತರಕಾರಿಗಳ ಬೆಲೆ ಹೆಚ್ಚಳಗೊಂಡಿದೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯ ವ್ಯಾಪಾರಿಗಳು ಸಗಟು ಬೆಲೆಗಿಂತ ಎರಡು ಪಟ್ಟು ದರಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ನಗರದಲ್ಲಿ ಕೊರೋನ ಸೋಂಕು ಹೆಚ್ಚಳದಿಂದ ಇತರೆ ಜಿಲ್ಲೆಗಳ ರೈತರು ನಗರಕ್ಕೆ ತರಕಾರಿ ತರಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ತರಕಾರಿ ಇಳುವರಿ ಕುಂಠಿತಗೊಂಡಿದೆ. ಹೊಸ ಬೆಳೆ ಬಂದಲ್ಲಿ ಬೆಲೆ ಇಳಿಕೆಯಾಗಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಗಗನಕ್ಕೇರಿದ್ದ ಕೊತ್ತಂಬರಿ ಸೊಪ್ಪಿನ ದರ ರವಿವಾರ ದಿಢೀರ್ ಇಳಿಕೆಯಾಗಿದ್ದು, ಟೊಮ್ಯಾಟೋ ಸೇರಿದಂತೆ ಮತ್ತಿತರೆ ತರಕಾರಿಗಳ ದರ ಏರಿಕೆಯಾಗಿದೆ. ಎರಡು ವಾರದ ಹಿಂದೆ ಒಂದು ಸೌತೆಕಾಯಿ 15 ರೂ. ಇದ್ದುದು ಇದೀಗ 5-10 ರೂ.ಗೆ ಇಳಿಕೆಯಾಗಿದೆ ಹಾಗೂ 40 ರೂ. ಇದ್ದ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಈಗ 15 ರೂ.ಗೆ ದೊರೆಯುತ್ತಿದೆ.

ಟೊಮ್ಯಾಟೊ ದರ ಏರಿಕೆಯಾಗಿದ್ದು, 20-25 ರೂ.ಗೆ ಒಂದು ಕೆ.ಜಿ. ಸಿಗುತ್ತಿದ್ದುದು ಇದೀಗ 30-40 ರೂ. ತಲುಪಿದೆ. ಮಳೆಯ ಪರಿಣಾಮ ಟೊಮ್ಯಾಟೊ ಬೆಳೆ ಹಾಳಾಗಿದ್ದು, ಉತ್ಪಾದನೆ ಕುಂಠಿತಗೊಂಡಿದೆ. ಹೀಗಾಗಿ ದಿಡೀರ್ ದರದಲ್ಲಿ ಏರಿಕೆಯಾಗಿದೆ.

ನಗರದಲ್ಲಿ ಬೀನ್ಸ್, ನುಗ್ಗೆಕಾಯಿ, ಕ್ಯಾರಟ್ ಮತ್ತಿತರ ಕೆಲವು ತರಕಾರಿಗಳು ಏರಿಕೆಯಾಗಿದ್ದು, ಕಳೆದ ಒಂದು ತಿಂಗಳಿಂದಲೂ ಸಮಸ್ಥಿತಿಯಲ್ಲಿವೆ. ಮಳೆಯೇ ತರಕಾರಿ ಏರಿಕೆ ಮತ್ತು ಇಳಿಕೆಗೆ ಕಾರಣವಾಗಿದೆ. ಮಳೆಯಿಂದಾಗಿ ಬೆಳೆ ಹಾಳಾಗಿದ್ದು 30 ರೂ. ಇದ್ದದ್ದು ಇದೀಗ 40 ರೂ.ಗೆ ಏರಿದೆ.

ಮಳೆಯಿಂದಾಗಿ ಕೆಲವು ಬೆಳೆಗಳು ಹಾಳಾಗಿವೆ. ಹೀಗಾಗಿ ದರದಲ್ಲಿ ಏರಿಳಿಕೆಯಾಗಿದೆ. ಟೊಮೇಟೊ ಮೂರು ದಿನಗಳ ಹಿಂದೆ ಒಂದು ಬಾಕ್ಸ್ ಗೆ 350-400 ರೂ. ಇದ್ದುದು, ಇದೀಗ 500 ರೂ.ಗೇರಿದೆ ಎಂದು ದಾಸನಪುರ ಉಪ ಮಾರುಕಟ್ಟೆ ಪ್ರಾಂಗಣದ ಸ್ಟಾರ್ ಮಳಿಗೆಯ ಸಗಟು ತರಕಾರಿ ವ್ಯಾಪಾರಿ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಹಾಪ್ ಕಾಮ್ಸ್ ನಲ್ಲಿ ಹಣ್ಣು-ತರಕಾರಿ ದರ (ಕೆ.ಜಿ.ಗಳಲ್ಲಿ)

ಬೀನ್ಸ್- 60 ರೂ.

ಬೆಂಡೆಕಾಯಿ -46 ರೂ.

ಕ್ಯಾರಟ್ ನಾಟಿ- 80 ರೂ.

ಹೀರೇಕಾಯಿ-  59 ರೂ.

ಮೂಲಂಗಿ-33 ರೂ.

ಟೊಮ್ಯಾಟೊ -42 ರೂ.

ಬೀಟ್‍ರೂಟ್ 27 ರೂ.

ಸೌತೆಕಾಯಿ- 36 ರೂ.

ನುಗ್ಗೆಕಾಯಿ- 98 ರೂ.

ದಪ್ಪ ಮೆಣಸಿನಕಾಯಿ -48 ರೂ.

ಎಲೆಕೋಸು- 24

ದಾಳಿಂಬೆ ಬಾಗ್ವ 160 ರೂ.

ಸಪೋಟ - 80 ರೂ.

ಏಲಕ್ಕಿ ಬಾಳೆ- 69 ರೂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News