×
Ad

ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಗಳ ಬಂಧನ: 50 ಕೆಜಿ ಗಾಂಜಾ ಜಪ್ತಿ

Update: 2020-09-14 16:44 IST

ಬೆಂಗಳೂರು, ಸೆ.14: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದೆಲ್ಲೆಡೆ ಮಾದಕ ವಸ್ತುಗಳ ಜಾಲದ ಮೇಲೆ ತೀವ್ರ ನಿಗಾವಹಿಸಿರುವ ಪೊಲೀಸರು, ಸೋಮವಾರವೂ ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಗಳನ್ನು ಬಂಧಿಸಿ 50 ಕೆ.ಜಿ ಗಾಂಜಾ ವಶ ಜಪ್ತಿ ಮಾಡುವಲ್ಲಿ ಇಲ್ಲಿನ ಕೋಣನಕುಂಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಳ್ಳೆಗಾಲ ಮೂಲದ ಸುರೇಶ್, ಆಂಧ್ರ ಪ್ರದೇಶದ ನಿವಾಸಿ ತಾತರಾಮ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಮಾರಾಟ ಸಂಬಂಧ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೋಣನಕುಂಟೆ ಠಾಣಾ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News