ಶಾರ್ಜಾದಲ್ಲಿ ಮಹಿಳೆಯರ ಟ್ವೆಂಟಿ-20 ಚಾಲೆಂಜ್ ಟೂರ್ನಿ

Update: 2020-09-14 18:32 GMT

ಮುಂಬೈ: ನವೆಂಬರ್ 1 ರಿಂದ 10ರ ನಡೆಯಲಿರುವ ಮಹಿಳಾ ಟ್ವೆಂಟಿ-20 ಚಾಲೆಂಜ್ ಟೂರ್ನಿಯನ್ನು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸುವ ಸಾಧ್ಯತೆಯಿದೆ.

 ರವಿವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗುಲಿ ಅವರು ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್, ಬಿಸಿಸಿಐ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಮತ್ತು ಖಜಾಂಚಿ ಅರುಣ್ ಧುಮಾಲ್ ಬಿಸಿಸಿಐ ಅಧ್ಯಕ್ಷರೊಂದಿಗೆ ಇದ್ದರು.

  ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಗಂಗುಲಿ ಸೆಪ್ಟೆಂಬರ್ 9ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ್ದರು ಮತ್ತು ಕಡ್ಡಾಯವಾಗಿ ಸಂಪರ್ಕತಡೆಯನ್ನು ಹೊಂದಿದ್ದರು. ಐತಿಹಾಸಿಕ ಶಾರ್ಜಾ ಕ್ರೀಡಾಂಗಣವು 240ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಯೋಜಿಸಿದೆ. ಗಂಗುಲಿ ಕ್ರೀಡಾಂಗಣದಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ನಿಯೋಗವು ದುಬೈ ಮತ್ತು ಅಬುಧಾಬಿಯ ಇತರ ಎರಡು ಸ್ಥಳಗಳಿಗೂ ಭೇಟಿ ನೀಡಲಿದೆ.

ಆಗಸ್ಟ್‌ನಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಮೂರು ತಂಡಗಳ ಮಹಿಳಾ ಟ್ವೆಂಟಿ-20 ಚಾಲೆಂಜ್ ಟೂರ್ನಿ ನಡೆಸಲು ನಿರ್ಧರಿಸಿತ್ತು. ಟೂರ್ನಿ ನಾಲ್ಕು ಪಂದ್ಯಗಳದ್ದಾಗಿದೆ. ಮಾರ್ಚ್‌ನಲ್ಲಿ ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾಗವಹಿಸಿದ ನಂತರ ಭಾರತದ ಮಹಿಳಾ ತಂಡ ಯಾವುದೇ ಕ್ರಿಕೆಟ್ ಆಡಿಲ್ಲ. ಮಹಿಳಾ ಕ್ರಿಕೆಟಿಗರು ಅಕ್ಟೋಬರ್ 3ನೇ ಅಥವಾ 4ನೇ ವಾರ ಯುಎಇ ತಲುಪುವ ಸಾಧ್ಯತೆಯಿದೆ. ಪಂದ್ಯಾವಳಿಯ ಮೊದಲು ಸಣ್ಣ ಶಿಬಿರವನ್ನು ನಡೆಸುವ ಸಾಧ್ಯತೆಯಿದೆ ಎಮದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News