ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪ: ಆಫ್ರಿಕಾ ಪ್ರಜೆ ಬಂಧನ

Update: 2020-09-16 16:11 GMT

ಬೆಂಗಳೂರು, ಸೆ.16: ಪಾರ್ಟಿಗಳಲ್ಲಿ ವಿವಿಧ ಜನರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮತ್ತೊಬ್ಬ ಆಫ್ರಿಕಾದ ಮೂಲದ ಪೆಡ್ಲರ್ ನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿತನನ್ನು ಆಫ್ರಿಕಾ ಮೂಲದ ಬೆನಾಲ್ಡ್ ಉಡೆನ್ನಾ ಎಂದು ಗುರುತಿಸಲಾಗಿದೆ. ಆರೋಪಿಯಿಂದ 12 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.

ಮೊದಲಿಗೆ ಬ್ಲಾಕೀ, ಕೋಕ್ ಹಾಗೂ ಜಾನ್ ಎಂಬ ಮೂವರು ಡ್ರಗ್ಸ್ ಪೆಡ್ಲರ್ ಗಳು ಇರುವುದಾಗಿ ತಿಳಿದು ಬಂದಿತ್ತು. ಆದರೆ, ಬಂಧಿತ ಆರೋಪಿ ಬೆನಾಲ್ಡ್ ಉಡೆನ್ನಾನೇ ಈ ಮೂರು ಹೆಸರುಗಳಲ್ಲಿ ಡ್ರಗ್ಸ್ ಪೂರೈಸುತ್ತಿರುವ ಮಾಹಿತಿ ವಿಚಾರಣೆ ವೇಳೆ ಲಭ್ಯವಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ಸರಬರಾಜು ಪ್ರಕರಣದಲ್ಲಿ ಈಗಾಗಲೇ ಆಫ್ರಿಕಾದ ಸೆನೆಗಲ್‍ನ ಡೆಕಾರ್ ಸಿಟಿಯ ಲೂಮ್ ಪೆಪ್ಪರ್ ಎಂಬ ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News