861.9 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನ ನಿರ್ಮಾಣ: ಟಾಟಾ ಸಂಸ್ಥೆಗೆ ಗುತ್ತಿಗೆ

Update: 2020-09-16 18:29 GMT

ಹೊಸದಿಲ್ಲಿ, ಸೆ. 16: ನೂತನ ಸಂಸತ್ ಭವನ ನಿರ್ಮಾಣದ 861.90 ಕೋಟಿ ರೂಪಾಯಿ ಗುತ್ತಿಗೆಯನ್ನು ಟಾಟಾ ಪ್ರೊಜೆಕ್ಟ್ ಲಿಮಿಟೆಡ್ ಪಡೆದುಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

 865 ಕೋಟಿ ರೂಪಾಯಿಯ ಬಿಡ್ ಸಲ್ಲಿಸಿದ ಲಾರ್ಸನ್ ಹಾಗೂ ಟರ್ಬೋ ಸಂಸ್ಥೆಯನ್ನು ಹಿಂದಿಕ್ಕಿ ಟಾಟಾ ಸಂಸ್ಥೆ ಈ ಬಿಡ್ ಪಡೆದುಕೊಂಡಿತು. ನೂತನ ಸಂಸತ್ ಕಟ್ಟಡದ ನಿರ್ಮಾಣಕ್ಕೆ ಕೇಂದ್ರ ಲೋಕೋಪಯೋಗಿ ಇಲಾಖೆ ಇಂದು ಬಿಡ್‌ಗಳನ್ನು ತೆರೆಯಿತು. ಈ ಯೋಜನೆಗೆ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಕಟ್ಟಡ ನಿರ್ಮಾಣಕ್ಕೆ 940 ಕೋಟಿ ರೂಪಾಯಿ ವೆಚ್ಚವನ್ನು ಸರಕಾರ ಅಂದಾಜಿಸಿತ್ತು. ಈ ಕಟ್ಟಡ ತ್ರಿಕೋನ ವಿನ್ಯಾಸದಲ್ಲಿ ಇರಲಿದೆ. ಈ ಕಟ್ಟಡವನ್ನು ಈಗಿರುವ ಸಂಸತ್ ಭವನದ ಸಮೀಪವೇ ನಿರ್ಮಿಸಲಾಗುವುದು ಎಂದು ಕೇಂದ್ರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News