ಚೀನಾ ಬೆಂಬಲಿತ ಬ್ಯಾಂಕ್ ನಿಂದ 9000 ಕೋ.ರೂ. ಸಾಲ ಪಡೆದ ಕೇಂದ್ರ ಸರಕಾರ: ಸಂಸತ್ ಗೆ ಮಾಹಿತಿ

Update: 2020-09-16 17:43 GMT

ಹೊಸದಿಲ್ಲಿ: ಕೇಂದ್ರ ಸರಕಾರವು ಚೀನಾ ಬೆಂಬಲಿತ ಏಶಿಯನ್ ಇನ್ಫ್ರಾಸ್ಟಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನಿಂದ 9,000 ಕೋಟಿ ರೂ. ಸಾಲ ಪಡೆದುಕೊಂಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯಗಳಿಗೆ ವರ್ಗಾಯಿಸಲು ಮತ್ತು ಕೊರೋನ ವಿರುದ್ಧದ ಹೋರಾಟದಲ್ಲಿ ವಿನಿಯೋಗಿಸಲು ಸರಕಾರ ಹಣಕಾಸು ವ್ಯವಸ್ಥೆಯನ್ನು ಮಾಡಿದ್ದು ಹೇಗೆ ಎನ್ನುವ ಬಿಜೆಪಿ ಸಂಸದ ಸುನೀಲ್ ಕುಮಾರ್ ಸಿಂಗ್ ಮತ್ತು ಪಿ.ಪಿ. ಚೌಧರಿಯವರ ಪ್ರಶ್ನೆಗೆ ಉತ್ತರಿಸಿದ ಠಾಕೂರ್, ಮೇ 8ರಂದು ಮೊದಲ ಸಾಲ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಜೂನ್ 19ರಂದು ಎರಡನೆ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು ಎಂದಿದ್ದಾರೆ.

ಜೂನ್ 19ರ 4 ದಿನಗಳ ಮೊದಲು ಗಲ್ವಾನ್ ನಲ್ಲಿ ಭಾರತ-ಚೀನಿ ಸೈನಿಕರ ನಡುವೆ ಘರ್ಷಣೆ ಸಂಭವಿಸಿತ್ತು.

ಬ್ಯಾಂಕ್ ನಿಂದ ಪಡೆದಿರುವ ಸಾಲಗಳನ್ನು ರಾಜ್ಯಗಳಿಗೆ ನೆರವಾಗಲು ಬಳಸಲಾಗುವುದು ಎಂದ ಅವರು, ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ 18,386 ಕೋಟಿ ರೂ. ಸಾಲವನ್ನು ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News