ಜೊಕೊವಿಕ್ ಮೂರನೇ ಸುತ್ತಿಗೆ

Update: 2020-09-16 18:39 GMT

ರೋಮ್: ಸನೊವಾಕ್ ಜೊಕೊವಿಕ್ ಬುಧವಾರ ಇಟಾಲಿಯನ್ ಓಪನ್ ಪಂದ್ಯಾವಳಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಯುಎಸ್ ಓಪನ್ ಅನರ್ಹತೆಯ ನಂತರ ತನ್ನ ಮೊದಲ ಪಂದ್ಯದಲ್ಲಿ ಆಡಿ ಮೂರನೇ ಸುತ್ತಿಗೆ ಪ್ರವೇಶಿಸಿದರು. ರೋಮ್‌ನಲ್ಲಿ ಮೊದಲ ಸುತ್ತಿನ ಬೈ ಸ್ವೀಕರಿಸಿದ ವಿಶ್ವದ ನಂಬರ್ ಒನ್ ಆಟಗಾರ ಜೊಕೊವಿಕ್ ಅವರು ಇಟಲಿಯ ಸಾಲ್ವಟೋರ್ ಕರುಸೊರನ್ನು 6-3, 6-2 ಅಂತರದಿಂದ ಸೋಲಿಸಿದರು.

    ನಾಲ್ಕು ಬಾರಿ ಇಟಾಲಿಯನ್ ಓಪನ್ ಪ್ರಶಸ್ತಿ ಬಾಚಿಕೊಂಡಿದ್ದ ಜೊಕೊವಿಕ್ ಮುಂದಿನ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಸಹ ಆಟಗಾರ ಸೆರ್ಬ್ ಫಿಲಿಪ್ ಕ್ರಜಿನೋವಿಕ್ ಅಥವಾ ಇಟಲಿಯ ಮಾರ್ಕೊ ಸೆಚಿನಾಟೊ ಸವಾಲು ಎದುರಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 6 ರಂದು ನ್ಯೂಯಾರ್ಕ್‌ನಲ್ಲಿ ಯುಎಸ್ ಓಪನ್‌ನಲ್ಲಿ ಅನರ್ಹಗೊಳ್ಳುವ ಮೊದಲು 2020ರಲ್ಲಿ ಜೊಕೊವಿಕ್ ಅಜೇಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News