ಹರ್ಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ವಿರುದ್ಧ ಇನ್ನೋರ್ವ ಶಾಸಕನ ಬಂಡಾಯ

Update: 2020-09-17 07:15 GMT

ಚಂಡಿಗಡ, ಸೆ.17: ಹರ್ಯಾಣ ಆಡಳಿತರೂಡ ಮೈತ್ರಿ ಪಕ್ಷ  ಜನನಾಯಕ್ ಜನತಾ ಪಾರ್ಟಿ(ಜೆಜೆಪಿ)ದಲ್ಲಿ ಹೊಸ ಬಂಡಾಯದ ಅಲೆ ಎದ್ದಿದ್ದು, ಇನ್ನೋರ್ವ ಶಾಸಕ ದೇವೇಂದ್ರ ಬಬ್ಲಿ ಪಕ್ಷದ ನಾಯಕತ್ವವನ್ನು ಬದಲಿಸಬೇಕೆಂಬ ಬೇಡಿಕೆ ಇಟ್ಟಿದ್ದು, ಪಕ್ಷದ 10 ಶಾಸಕರುಗಳಲ್ಲಿ ಅತೃಪ್ತಿ ಇದೆ ಎಂದು ಹೇಳಿದ್ದಾರೆ.

ಬಬ್ಲಿ ಜೆಜೆಪಿ ವಿರುದ್ಧ ಬಂಡೇದ್ದಿರುವ ಎರಡನೇ ಶಾಸಕನಾಗಿದ್ದಾರೆ. ಶಾಸಕ ರಾಮಕುಮಾರ್ ಗೌತಮ್ ಕೂಡ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

 ಗೌತಮ್ ಹಾಗೂ ಬಬ್ಲಿ ಬಿಜೆಪಿಯೊಂದಿಗಿನ ಮೈತ್ರಿ ಸರಕಾರದಲ್ಲಿ ತಮಗೆ ಸಂಪುಟದಲ್ಲಿ ಸ್ಥಾನ ಸಿಗಬಹುದೆಂಬ ವಿಶ್ವಾಸದಲ್ಲಿದ್ದರು. ಆದರೆ ಈ ತನಕ ಯಾವುದೆ ಸ್ಥಾನಮಾನ ಲಭಿಸಿಲ್ಲ.

"ದುಷ್ಯಂತ್ ಎಲ್ಲ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡಿರುವುದು ತಪ್ಪು. ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಜೆಜೆಪಿ ಕೋಟಾದಲ್ಲಿರುವ ಎಲ್ಲ ಸಚಿವರುಗಳನ್ನು ದುಷ್ಯಂತ್ ಸೇರಿಸಿಕೊಳ್ಳಬೇಕಾಗಿತ್ತು. ಪಕ್ಷದ ಶಾಸಕರನ್ನು ವಿವಿಧ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು. ಇದು ಏಕೆ ನಡೆದಿಲ್ಲ? ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ'' ಎಂದು ಬಬ್ಲಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News