ಜನರು ಪಾಪಡ್ ತಿಂದು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆಯೇ: ಕೇಂದ್ರ ಸಚಿವರ ಕಾಲೆಳೆದ ರಾವತ್

Update: 2020-09-17 09:49 GMT

ಹೊಸದಿಲ್ಲಿ, ಸೆ.17:ಮಹಾರಾಷ್ಟ್ರ ಸರಕಾರವು ಕೋವಿಡ್-19 ನಿಭಾಯಿಸಿದ ರೀತಿಗೆ ಕೆಲವು ರಾಜ್ಯಸಭಾ ಸದಸ್ಯರ ಟೀಕೆಗೆ ಪ್ರತಿಕ್ರಿಯಿಸಿದ ಶಿವಸೇನೆಯ ಸಂಸದ ಸಂಜಯ್ ರಾವತ್, ರಾಜ್ಯದಲ್ಲಿ ಚೇತರಿಸಿಕೊಂಡವರ ಸಂಖ್ಯೆಯೂ ಅಧಿಕವಿದೆ ಎಂದು ಬೆಟ್ಟು ಮಾಡಿದರು.

"ವಿಶ್ವ ಆರೋಗ್ಯ ಸಂಸ್ಥೆ(ಡಬ್ಲು ಎಚ್‌ಒ)ಕೊಳೆಗೇರಿ ಧಾರಾವಿಯಲ್ಲಿ ಕೊರೋನವನ್ನು ನಿಯಂತ್ರಿಸಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ(ಬಿಎಂಸಿ) ಪ್ರಯತ್ನವನ್ನು ಶ್ಲಾಘಿಸಿದೆ. ನನ್ನ ತಾಯಿ ಹಾಗೂ ಸಹೋರನಿಗೂ ಕೋವಿಡ್-19 ಸೋಮಕು ತಗಲಿತ್ತು. ಮಹಾರಾಷ್ಟ್ರದ ಹಲವು ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಇಂದು ಧಾರಾವಿಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಹಾರಾಷ್ಟ್ರ ಸರಕಾರವನ್ನು ನಿನ್ನೆ ಟೀಕಿಸಿದ್ದ ಕೆಲವು ಸದಸ್ಯರಿಗೆ ಈ ಅಂಶವನ್ನು ತಿಳಿಸಲು ಬಯಸುವೆ. ಇಷ್ಟೊಂದು ಜನರು ಹೇಗೆ ಚೇತರಿಸಿಕೊಂಡರು ಎಂದು ಕೇಳಲು ಬಯಸುವೆ?ಭಾಭಿಜಿ ಮಾಡಿರುವ ಪಾಪಡ್ ತಿಂದು ಇವರೆಲ್ಲರೂ ಚೇತರಿಸಿಕೊಂಡಿದ್ದಾರೆಯೇ? ಇದೊಂದು ರಾಜಕೀಯ ಹೋರಾಟವಲ್ಲ. ಜನರ ಜೀವ ಉಳಿಸಲು ಎಲ್ಲರೂ ಹೋರಾಡಬೇಕಾಗಿದೆ'' ಎಂದರು.

ಪಾಪಡ್ ಪದವನ್ನು ಬಳಸುವ ಮೂಲಕ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಲ್ ಹೇಳಿಕೆಯನ್ನು ರಾವತ್ ನೆನಪಿಸಿದರು. ಪಾಪಡ್(ಹಪ್ಪಳ)ಸೇವನೆಯಿಂದ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ ಎಂದು ಮೇಘಾವಲ್ ಹೇಳಿಕೆ ನೀಡಿದ್ದರು.ಸ್ವಲ್ಪ ಸಮಯದ ಬಳಿಕ ಅವರಿಗೇ ಕೊರೋನ ಸೋಂಕು ತಗಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News