ಸೌದಿ: 1.2 ಲಕ್ಷ ವರ್ಷಗಳ ಹಿಂದಿನ ಹೆಜ್ಜೆಗುರುತುಗಳು ಪತ್ತೆ

Update: 2020-09-17 15:21 GMT
ಸಾಂದರ್ಭಿಕ ಚಿತ್ರ

ರಿಯಾದ್ (ಸೌದಿ ಅರೇಬಿಯ), ಸೆ. 17: ಸೌದಿ ಅರೇಬಿಯದ ವಾಯುವ್ಯ ಭಾಗದ ತಬುಕ್ ರಾಜ್ಯದಲ್ಲಿ 1,20,000 ವರ್ಷಗಳ ಹಿಂದಿನ ಮಾನವ ಮತ್ತು ಪ್ರಾಣಿಗಳ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಲಾಗಿದೆ.

ಪುರಾತನ ಶಾಸ್ತ್ರಜ್ಞರು ಹಳೆಯ ಒಣ ಸರೋವರವೊಂದರಲ್ಲಿ ಮಾಡಿರುವ ಈ ಸಂಶೋಧನೆಗಳನ್ನು ರಿಯಾದ್‌ನಲ್ಲಿ ಗುರುವಾರ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ಸಚಿವಾಲಯದ ಪರಂಪರೆ ಆಯೋಗ ಪ್ರದರ್ಶಿಸಿತು.

ಪ್ರಾಚೀನ ಒಣ ಸರೋವರದ ಸುತ್ತ ಮಾನವರು, ಒಂಟೆಗಳು, ಆನೆಗಳು ಮತ್ತು ಕಾಡು ಪ್ರಾಣಿಗಳ ಹೆಜ್ಜೆ ಗುರುತುಗಳನ್ನು ಸೌದಿ ಪುರಾತತ್ವ ತಜ್ಞರು ಪತ್ತೆಹಚ್ಚಿದ್ದಾರೆ.

 ‘‘ಏಳು ಮಾನವರು, 107 ಒಂಟೆಗಳು, 43 ಆನೆಗಳ ಹೆಜ್ಜೆ ಗುರುತುಗಳು ಮತ್ತು ಕಾಡಿನ ಆಡು, ಜಿಂಕೆ ಮತ್ತು ಗೋವು ಪ್ರಭೇದಗಳ ಪ್ರಾಣಿಗಳಿಗೆ ಸೇರಿದದ ಗುರುತುಗಳನ್ನು ಪುರಾತನ ಶಾಸ್ತ್ರಜ್ಞರ ತಂಡವು ಪತ್ತೆಹಚ್ಚಿದೆ. ಈ ಪ್ರಾಣಿಗಳು ಗುಂಪುಗಳಲ್ಲಿ ಓಡಾಡುತ್ತಿದ್ದವು’’ ಎಂದು ಪರಂಪರೆ ಆಯೊಗದ ಮುಖ್ಯಾಧಿಕಾರಿ ಡಾ. ಜಾಸಿರ್ ಅಲ್ ಹರ್ಬಿಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News