ಬೆಂಗಳೂರು: 11 ಮಂದಿ ಡ್ರಗ್ ಪೆಡ್ಲರ್ ಗಳ ಬಂಧನ; 108 ಕೆಜಿ ಗಾಂಜಾ ಜಪ್ತಿ

Update: 2020-09-18 11:56 GMT

ಬೆಂಗಳೂರು, ಸೆ.18: ಗಾಂಜಾ ಮಾರಾಟ ಜಾಲದ ವಿರುದ್ಧ ಸಕ್ರಿಯವಾಗಿ ಕಾರ್ಯಾಚರಣೆ ಕೈಗೊಂಡಿರುವ ನಗರದ ಪೊಲೀಸರು, ಶುಕ್ರವಾರವೂ 11 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ 108 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಗುಂಪು ಕಟ್ಟಿಕೊಂಡು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೆಂಗೇರಿಯ ಬಾಲರಾಜು(27), ಬಾಗಲೂರಿನ ಗೋಪಿನಾಥ್(34), ಆಂಧ್ರದ ಕುಪ್ಪಂನ ವಿನೋದ್(25), ಅನಂತಪುರದ ಮನೋಹರ್(29), ತಮಿಳುನಾಡಿನ ಗಂಡುಗಲ್‍ನ ಪಾಲ್‍ಪಾಂಡಿ(27), ವೈಕಾಟ್ಟು(30), ಮದನ್‍ಕುಮಾರ್(25), ಬಾಲಗುರು(22), ಸೆಲ್ವಂ(26) ಎಂಬುವವರನ್ನು ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 22 ಲಕ್ಷ ರೂ. ಮೌಲ್ಯದ 57 ಕೆ.ಜಿ. ಗಾಂಜಾ, 10 ಮೊಬೈಲ್, 20,500 ರೂ. ನಗದು, ಕಾರು, ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಜೋಶಿ ಮಹದೇವ್ ತಿಳಿಸಿದ್ದಾರೆ.

ಬೈಕ್ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಮನೋಹರ್, ವಿಶಾಖಪಟ್ಟಣ ಮೂಲದ ಕೃಪಾನಂದ ಸೇರಿದಂತೆ ಹಲವರು ತಮಿಳುನಾಡಿನಿಂದ 1 ಕೆ.ಜಿ. ಗಾಂಜಾ 8 ಸಾವಿರದಂತೆ ಖರೀದಿಸಿ, ನಗರದ ಹೊರವಲಯದ ಪ್ರದೇಶಗಳಲ್ಲಿ 20 ರಿಂದ 30 ಸಾವಿರದಂತೆ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅದೇ ರೀತಿ, ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ವಿಶಾಖಪಟ್ಟಣದ ಖೈರುಲ್ಲಾ(20), ಹೆಚ್‍ಎಎಲ್‍ನ ಫಾರೂಕ್(31) ಎಂಬುವರನ್ನು ಇಲ್ಲಿನ ತಿಲಕನಗರ ಠಾಣಾ ಪೊಲೀಸರು, ಬಂಧಿಸಿದ್ದಾರೆ.

ಬಂಧಿತರಿಂದ 15 ಲಕ್ಷ ರೂ. ಮೌಲ್ಯದ 51 ಕೆ.ಜಿ. ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News