ರಾಜಧಾನಿ ಬೆಂಗಳೂರಿನಲ್ಲಿಂದು 3,623 ಕೊರೋನ ಪ್ರಕರಣಗಳು ದೃಢ; 37 ಮಂದಿ ಮೃತ್ಯು

Update: 2020-09-18 17:12 GMT

ಬೆಂಗಳೂರು, ಸೆ.18: ರಾಜಧಾನಿಯಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಸಂಜೆ 5 ಗಂಟೆಯ ತನಕ 3623 ಹೊಸ ಕೊರೋನ ಪ್ರಕರಣಗಳು ದೃಢಪಟ್ಟಿದ್ದು, 2725 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಹಾಗೂ 37 ಜನರು ಮೃತಪಟ್ಟಿದ್ದಾರೆ.

ನಗರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,87,705 ಕ್ಕೆ ಏರಿಕೆಯಾಗಿದ್ದರೆ, 1,43,198 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು ನಗರದಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ 2,592 ಕ್ಕೆ ಹೆಚ್ಚಳವಾಗಿದೆ. ನಗರದಾದ್ಯಂತ 41,914 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಸರಕಾರಿ, ಖಾಸಗಿ ಹಾಗೂ ನಿಗದಿತ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯಗಳಲ್ಲಿ ಶುಕ್ರವಾರ 3622 ವ್ಯಕ್ತಿಗಳು ಸೇರಿದಂತೆ ಇದುವರೆಗೂ 2,36,401 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ನಗರದಲ್ಲಿ ಇದುವರೆಗೂ 30,928 ಕಂಟೈನ್ಮೆಂಟ್ ಝೋನ್‍ಗಳಿದ್ದು, ಅವುಗಳ ಪೈಕಿ 15,800ಕ್ಕೂ ಅಧಿಕ ಸಕ್ರಿಯ ಕಂಟೈನ್ಮೆಂಟ್ ಝೋನ್‍ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News