ಸೋಮವಾರದಿಂದ ವಿಧಾನಮಂಡಲ ಅಧಿವೇಶನ: ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ

Update: 2020-09-20 16:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 20: ಇಂದಿನಿಂದ ವಿಧಾನ ಮಂಡಲ ಅಧಿವೇಶನವು ಆರಂಭವಾಗುತ್ತಿದ್ದು, ಉಭಯ ಸದನಗಳ ಪ್ರವೇಶಕ್ಕೆ ಕೊರೋನ ನೆಗೆಟಿವ್ ವರದಿ ಮಾತ್ರವಲ್ಲದೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯವಾಗಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಸರಕಾರದ ಉಪ ಕಾರ್ಯದರ್ಶಿ ಎಚ್.ಎಸ್.ಚನ್ನಬಸಪ್ಪ, ಅಧಿವೇಶನದ ಅವಧಿಯಲ್ಲಿ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಅದೇ ರೀತಿ, ಸಚಿವರ ಹಾಗೂ ಶಾಸಕರ ಭದ್ರತಾ ಸಿಬ್ಬಂದಿಗಳು ಮೊದಲ ಮಹಡಿಯಲ್ಲಿನ ಸಮಿತಿ ಕೊಠಡಿ ಸಂಖ್ಯೆ 123, ನಾಲ್ಕನೇ ಮಹಡಿಯಲ್ಲಿನ ಸಮ್ಮೇಳನ ಕೊಠಡಿ ಸಂಖ್ಯೆ 419ಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ವಿಧಾನಸೌಧದ ಪಶ್ಚಿಮ ದ್ವಾರದ 1ನೇ ಮಹಡಿಯ ಮೊಗಸಾಲೆಯಲ್ಲಿ ಕುಳಿತುಕೊಳ್ಳಲು, ನಿಲ್ಲಲು ಯಾರಿಗೂ ಅವಕಾಶ ಇಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News