ಗೊತ್ತಿದೆ!

Update: 2020-09-20 19:30 GMT
Editor : -ಮಗು

ಆ ಗುರು ಲೋಕವಿಖ್ಯಾತನಾಗಿದ್ದ. ಅರ್ಹ ಶಿಷ್ಯರನ್ನಷ್ಟೇ ಅವನು ಸ್ವೀಕರಿಸುತ್ತಿದ್ದ.

ದೊಡ್ಡ ಪಂಡಿತರಿಂದ ಶಿಫಾರಸುಗೈದ ವಿದ್ಯಾರ್ಥಿಗಳೆಲ್ಲ ಆ ಗುರುವಿನಿಂದ ತಿರಸ್ಕೃತರಾಗುತ್ತಿದ್ದರು.
ಸಂದರ್ಶನದಲ್ಲಿ ಅವನು ಒಂದೇ ಒಂದು ಪ್ರಶ್ನೆ ಕೇಳುತ್ತಿದ್ದ ‘‘ನಿನಗೇನು ಗೊತ್ತಿದೆ, ಅದನ್ನು ಹೇಳು...’’
ಶಿಷ್ಯರು ತಾವು ಕಂಡುದನ್ನು, ಕಲಿತುದನ್ನು ಅವರ ಮುಂದಿಡುತ್ತಿದ್ದರು. ತಕ್ಷಣ ಗುರು ಅವರನ್ನು ತಿರಸ್ಕರಿಸುತ್ತಿದ್ದ.
ಹೀಗಿರುವಾಗ ಒಬ್ಬ ಸರಕಾರಿ ಶಾಲೆಯಲ್ಲಿ ಕಲಿತ ಬಡ ವಿದ್ಯಾರ್ಥಿ ಆ ಗುರುವಿನ ಸಂದರ್ಶನಕ್ಕೆ ಹೋದ.
ಗುರು ಕೇಳಿದ ‘‘ಹೇಳು, ನಿನಗೇನು ಗೊತ್ತಿದೆ?’’
ಶಿಷ್ಯ ತಕ್ಷಣ ಉತ್ತರಿಸಿದ ‘‘ಗುರುವೇ, ನನಗೇನೂ ಗೊತ್ತಿಲ್ಲ ಎನ್ನುವುದು ನನಗೆ ಗೊತ್ತಿದೆ’’

ತಕ್ಷಣ ಗುರು ಆತನನ್ನು ಶಿಷ್ಯನಾಗಿ ಸ್ವೀಕರಿಸಿದ.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !