ಮೂಗಿನ ಮೂಲಕ ಆವಿ ತೆಗೆದುಕೊಳ್ಳುವುದರಿಂದ ಸೋಂಕು ನಿಷ್ಕ್ರಿಯ: ಹೊಸ ಅಧ್ಯಯನ

Update: 2020-09-20 18:09 GMT

ಬೆಂಗಳೂರು, ಸೆ. 20: ಕೊರೋನ ಸೋಂಕು ತಡೆಯಲು ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಳ್ಳುವುದರ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು. ಇದೀಗ ಅದರ ಜತೆಗೆ ಮೂಗಿನ ಮೂಲಕ ನಿತ್ಯ ಆವಿ ತೆಗೆದುಕೊಳ್ಳುವುದರಿಂದ ಸೋಂಕು ನಿಷ್ಕ್ರಿಯಗೊಳಿಸಬಹುದು ಎಂದು ವೈದ್ಯಕೀಯ ತಂಡದ ಹೊಸ ಅಧ್ಯಯನವು ಹೇಳಿದೆ.

ಕೊರೋನ ಸೋಂಕು ರಚನೆಯೂ ಇನ್ ಫ್ಲುಯೆಂಜಾ ಮತ್ತು ಸಾರ್ಸ್ ಕೊರೋನ ವೈರಸ್‍ನ ರೀತಿಯೇ ಇದೆ.  ಹಿಂದಿನ ಅಧ್ಯಯನಗಳಲ್ಲಿ ಕೊರೋನ ಮತ್ತು ಇನ್‍ಫ್ಲುಯೆಂಜಾ ವೈರಸ್‍ಗಳು ಅಧಿಕ ತಾಪಮಾನಕ್ಕೆ ನಿಷ್ಕ್ರಿಯವಾಗುತ್ತವೆ ಎಂಬುದು ಸಾಬೀತಾಗಿದೆ. ಮುಂಬೈನ `ಸೆವೆನ್ ಹಿಲ್ಸ್' ಆಸ್ಪತ್ರೆಯ ಕನ್ಸಲ್ಟಂಟ್ ಡಾ.ದಿಲೀಪ್ ಪವಾರ್ ಮತ್ತು ತಂಡ ಅಧ್ಯಯನ ಮಾಡಿದ್ದು, ಅಧಿಕ ತಾಪಮಾನ ಮತ್ತು ತೇವ ಸ್ಥಿತಿಯಲ್ಲಿ ಸೋಂಕು ವರ್ತನೆಯನ್ನು ಅಧ್ಯಯನ ಮಾಡಲಾಗಿದೆ.

ಈ ತಂಡ ಎರಡು ಗುಂಪುಗಳಲ್ಲಿ ಅಧ್ಯಯನ ನಡೆಸಿತು. ಮೊದಲ ಗುಂಪಿನಲ್ಲಿ ಕೋವಿಡ್-19 ರೋಗಿಗಳ ಸಂಪರ್ಕಕ್ಕೆ ಬಂದ ರೋಗ ಲಕ್ಷಣಗಳಿಲ್ಲದವರು ಇದ್ದರು. ವೈದ್ಯರು ಮತ್ತು ನರ್ಸ್‍ಗಳೂ ಸೇರಿದ್ದರು. ಇವರು ನೇರವಾಗಿ ಅಥವಾ ಪ್ರವಾಸದ ಸಂದರ್ಭದಲ್ಲಿ ಕೋವಿಡ್ ರೋಗಿಗಳ ಸಂಪರ್ಕಕ್ಕೆ ಬಂದವರು. ಈ ಗುಂಪಿನ ರೋಗಿಗಳಿಗೆ ದಿನಕ್ಕೆ ಎರಡು ಸಲ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟೀಮರ್ ಅಥವಾ ಸಾಮಾನ್ಯವಾಗಿ ನೀರನ್ನು ಕುದಿಸಿದಾಗ ಬರುವ ಆವಿಯನ್ನು ಮೂಗಿನ ಹೊಳ್ಳೆಗಳ ಮೂಲಕ ಸೆಳೆದುಕೊಳ್ಳಲು ಸೂಚಿಸಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News