ಗಾಲ್ಫ್‌ನಲ್ಲೂ ಮಿಂಚಿದ ವಿಶ್ವದ ನಂ .1 ಟೆನಿಸ್ ಆಟಗಾರ್ತಿ ಆಶ್ಲೆ ಬಾರ್ಟಿ

Update: 2020-09-21 18:37 GMT

ಸಿಡ್ನಿ: ಬಹುಮುಖ ಪ್ರತಿಭಾವಂತೆ ಆಸ್ಟ್ರೇಲಿಯದ ಆಶ್ಲೆ ಬಾರ್ಟಿ ಟೆನಿಸ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ವೃತ್ತಿಪರ ಕ್ರಿಕೆಟಿಗರಾಗಿಯೂ ಮಿಂಚಿದ್ದರು. ಇದೀಗ ಗಾಲ್ಫ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

   ವಿಶ್ವದ ನಂಬರ್ ಒನ್ ಟೆನಿಸ್ ಆಟಗಾತಿ ಬಾರ್ಟಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಫ್ರೆಂಚ್ ಓಪನ್ ಕಿರೀಟವನ್ನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಅವರು ಗಾಲ್ಫ್‌ನಲ್ಲಿ ಕೈಚಳಕ ತೋರಿಸಿದ್ದಾರೆ.

    ಕೊರೋನ ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಯುಎಸ್ ಓಪನ್‌ನಲ್ಲಿ ಆಡುವುದರಿಂದ ಹಿಂದೆ ಸರಿದ ಬಾರ್ಟಿ ಗಾಲ್ಫ್‌ನತ್ತ ಗಮನ ಹರಿಸಿದರು. 24ರ ಹರೆಯದ ಬಾರ್ಟಿ ಅಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಬ್ರಿಸ್ಬೇನ್ ಸಮೀಪವಿರುವ ಬ್ರೂಕ್‌ವಾಟರ್ ಗಾಲ್ಫ್ ಕ್ಲಬ್ ಮಹಿಳಾ ಪ್ರಶಸ್ತಿಯನ್ನು ಜಯಿಸಿದ್ದಾರೆ. ಪುರುಷರ ವಿಭಾಗದ ಚಾಂಪಿಯನ್ ಲೂಯಿಸ್ ಡೊಬ್ಬೆಲಾರ್ ಅವರೊಂದಿಗೆ ಟ್ರೋಫಿಯನ್ನು ಹಿಡಿದಿರುವ ಫೋಟೊವನ್ನು ಬಾರ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  ಬಾರ್ಟಿ 2015-16ರಲ್ಲಿ ಮಹಿಳಾ ಬಿಗ್ ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಪರ ಆಡಿದ್ದರು. ಗ್ರಾನ್‌ಸ್ಲಾಮ್ ವಿಜೇತ ಪ್ಯಾಟ್ ರಾಫ್ಟರ್ ಮತ್ತು ಆಕೆಯ ಗೆಳೆಯ ಗ್ಯಾರಿ ಕಿಸ್ಸಿಕ್ ಆಕೆಗೆ ಗಾಲ್ಫ್ ಕೋಚ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News