ಬಿಹಾರ ಚುನಾವಣೆ: ಆರ್‌ಜೆಡಿಗೆ ಸಮಾಜವಾದಿ ಪಕ್ಷ ಬೆಂಬಲ

Update: 2020-09-22 08:27 GMT

ಹೊಸದಿಲ್ಲಿ, ಸೆ.22:ಅತ್ಯಂತಪ್ರಮುಖ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷ(ಎಸ್ಪಿ)ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವುದಲ್ಲದೆ, ಸ್ಪರ್ಧೆಯ ಬದಲಿಗೆ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.

ಸಮಾಜವಾದಿ ಪಕ್ಷ ಸೆಪ್ಟಂಬರ್ 21 ಸೋಮವಾರ ಟ್ವಿಟರ್‌ನ ಮೂಲಕ ಈ ಘೋಷಣೆ ಮಾಡಿದೆ.

 ಹೌದು ಪಕ್ಷ ಇಂತಹ ನಿರ್ಧಾರ ಕೈಗೊಂಡಿದ್ದು, ಆ ನಂತರ ಘೋಷಣೆ ಮಾಡಿದೆ ಎಂದು ಎಸ್ಪಿ ಎಂಎಲ್‌ಸಿ ಉದಯವೀರ್ ಸಿಂಗ್ ಹೇಳಿದ್ದಾರೆ.

ಎಸ್ಪಿ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಎರಡು ಕಾರಣವಿದೆ. ಒಂದನೆಯದು ಸಮಾನಮನಸ್ಕ ಪಕ್ಷಗಳನ್ನು ದುರ್ಬಲಗೊಳಿಸಲು ಪಕ್ಷ ಬಯಸುವುದಿಲ್ಲ. ಎರಡನೇಯದು ಬಿಹಾರದಲ್ಲಿ ಎಸ್ಪಿ ಬಲಿಷ್ಠ ನೆಲೆ ಹೊಂದಿಲ್ಲ. ಹೀಗಾಗಿ ತನ್ನ ಶಕ್ತಿ ಹಾಗೂ ಸಂಪನ್ಮೂಲಗಳನ್ನು ವ್ಯರ್ಥ ಮಾಡಲು ಸಿದ್ಧವಿಲ್ಲ ಎಂದು ಪಕ್ಷದಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

 2015ರಲ್ಲಿ ಎಸ್ಪಿ ಸೀಟು ಹಂಚಿಕೆ ವಿವಾದದಿಂದಾಗಿ ಆರ್‌ಜೆಡಿ, ಜೆಡಿಯು ಹಾಗೂ ಕಾಂಗ್ರೆಸ್ ಮಹಾಮೈತ್ರಿಕೂಟದಿಂದ ಹೊರಗುಳಿದು ಎನ್‌ಸಿಪಿಯೊಂದಿಗೆ ಸ್ಪರ್ಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News