ಬೆಂಗಳೂರು: ಪ್ಲೆಸೆಂಟಾ ಪ್ರೆವಿಯಾ ಸಮಸ್ಯೆಯಿದ್ದ ಗರ್ಭಿಣಿ ಮಹಿಳೆಗೆ ಯಶಸ್ವಿ ಚಿಕಿತ್ಸೆ

Update: 2020-09-22 17:01 GMT

ಬೆಂಗಳೂರು, ಸೆ.22: ಪ್ಲೆಸೆಂಟಾ ಪ್ರೆವಿಯಾ ಎಂಬ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಗೆ ನಗರದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡಿ ಯಾವುದೇ ಸಮಸ್ಯೆಯಾಗದಂತೆ ಪ್ರಸವ ಮಾಡಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಫೊರ್ಟೀಸ್ ಆಸ್ಪತ್ರೆಯ ಗೈನಾಕೊಲಾಜಿಯ ಕನ್ಸಲ್ಟೆಂಟ್ ಡಾ.ಅನು ಶ್ರೀಧರ್ ನೇತೃತ್ವದ ತಜ್ಞ ವೈದ್ಯರ ತಂಡ, ಗರ್ಭಿಣಿ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಪ್ಲೆಸೆಂಟಾ ಎಂಬುದು ಒಂದು ಅಂಗವಾಗಿದ್ದು, ಇದು ಮಹಿಳೆ ಗರ್ಭ ಧರಿಸಿದ ಸಂದರ್ಭದಲ್ಲಿ ಬೆಳೆಯುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ಗರ್ಭಾಶಯದ ಮೇಲ್ಭಾಗದಲ್ಲಿ ಅಥವಾ ಬದಿಗೆ ಅಂಟಿಕೊಂಡಿರುತ್ತದೆ. ಆದರೆ, ಇದು ಕೆಳಭಾಗದಲ್ಲಿ ಬೆಳೆದರೆ, ಪ್ಲೆಸೆಂಟಾ ಪ್ರೆವಿಯಾ ಆಗುತ್ತದೆ.

ಈ ವೇಳೆ ಮಾತನಾಡಿದ ಅವರು, ಪ್ಲೆಸೆಂಟಾ ಪ್ರೆವಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಗೆ ಸಿ-ಸೆಕ್ಷನ್ ಚಿಕಿತ್ಸೆ ನೀಡಿದ್ದರೆ, ಅತಿಯಾದ ರಕ್ತಸ್ರಾವದಿಂದ ರೋಗಿಯ ಪ್ರಾಣಕ್ಕೆ ಅಪಾಯವಿತ್ತು. ಈ ಹಿನ್ನೆಲೆಯಲ್ಲಿ ನಾವು ಅತ್ಯಂತ ಕಡಿಮೆ ರಕ್ತಸ್ರಾವವಾಗುವ ಸುರಕ್ಷಿತವಾದ ವಿಧಾನವನ್ನು ವಿಭಿನ್ನವಾದ ರೀತಿಯಲ್ಲಿ ಕೈಗೊಂಡೆವು. ಮಗುವನ್ನು ಹೊರ ತೆಗೆದ ನಂತರ ಸೀಸೇರಿಯನ್ ಹೈಸ್ಟೆರೆಕ್ಟಮಿಯನ್ನು ಕೈಗೊಳ್ಳುವ ಮೂಲಕ ಪ್ಲೆಸೆಂಟಾದೊಂದಿಗೆ ಗರ್ಭಾಶಯವನ್ನು ತೆಗೆದುಹಾಕಿದೆವು. ಈಗ ತಾಯಿ-ಮಗು ಆರೋಗ್ಯವಾಗಿದ್ದಾರೆಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News