ಮಾದಕ ವಸ್ತು ಮಾರಾಟ ಯತ್ನ: ಇಬ್ಬರ ಬಂಧನ, 3.30 ಕೋಟಿ ರೂ. ಮೌಲ್ಯದ ಮಾಲು ಜಪ್ತಿ

Update: 2020-09-23 12:03 GMT

ಬೆಂಗಳೂರು, ಸೆ.23: ಸಿಟಿ ಮಾರ್ಕೆಟ್ ವ್ಯಾಪ್ತಿಯ ಪಾರ್ಕಿಂಗ್ ಜಾಗದಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, 3 ಕೋಟಿ 30 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ರಾಜುರಾಮ್ ಬಿಷ್ಣೋಯ್(31) ಮತ್ತು ಸುನೀಲ್‍ ಕುಮಾರ್(21) ಎಂದು ಗುರುತಿಸಲಾಗಿದೆ.

ಬೆಳಗ್ಗೆ 9 ಗಂಟೆಯ ಸುಮಾರಿಗೆ ಸಿಟಿ ಮಾರ್ಕೆಟ್ ವ್ಯಾಪ್ತಿಯ ಮೆಟ್ರೋ ಎ ಗೇಟ್ ಹಿಂಭಾಗದ ಪಾರ್ಕಿಂಗ್ ಜಾಗದ ರಸ್ತೆಯಲ್ಲಿ ಇಬ್ಬರು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಬಂಧಿಸಿ, 125 ಗ್ರಾಂ ತೂಕದ ಅಫೀಮು, 150 ಗ್ರಾಂ ಬ್ರೌನ್‍ ಶುಗರ್, 25 ಎಲ್‍ಎಸ್‍ಡಿ ಸ್ಟ್ರಿಪ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಮನೆಯಿಂದ ವಿವಿಧ ಮಾದಕ ವಸ್ತುಗಳು, 3 ಮೊಬೈಲ್, 2 ಬೈಕ್‍ಗಳು, 3 ತೂಕ ಮಾಡುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News