ಆಹಾರ ಪೌಷ್ಟಿಕತೆ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ

Update: 2020-09-23 12:52 GMT

 ಉಡುಪಿ, ಸೆ.23: ಭಾರತದಲ್ಲಿ ಶೇ.68ರಷ್ಟು ಯುವಜನತೆಯಿದ್ದು, ಅವರೆಲ್ಲರೂ ಆರೋಗ್ಯ ಹಾಗೂ ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಗಮನಹರಿಸಿದರೆ ದೇಶ ಹೆಚ್ಚು ಆರೋಗ್ಯವಂತರನ್ನು ಹೊಂದಿದ ಬಲಿಷ್ಟ ರಾಷ್ಟ್ರವಾಗುತ್ತದೆ. ಹಾಗೂ ಮನೆಯಲ್ಲೇ ಕೈತೋಟ ಮಾಡುವುದರಿಂದ ತಮಗೆ ಬೇಕಾದ ಪೌಷ್ಟಿಕ ತರಕಾರಿ ಗಳನ್ನು ಬೆಳೆದುಕೊಳ್ಳಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಹೇಳಿದ್ದಾರೆ.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಧನಂಜಯ ವಹಿಸಿದ್ದರು. ಕರ್ಜೆ ಆಯುರ್ವೇದ ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ನಾಯಕ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಚೈತನ್ಯ ಹೆಚ್.ಎಸ್, ಪೇತ್ರಿ ಸಮೃದ್ಧಿ ಮಳಾ ಮಂಡಳಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಭಟ್, ಚೇರ್ಕಾಡಿ ಗ್ರಾಮದ ಅಂಗನವಾಡಿ ಮೇಲ್ವಿಚಾರಕಿ ವನಿತಾ ಉಪಸ್ಥಿತರಿದ್ದರು. ವನಿತಾ ಶೆಟ್ಟಿ ಸ್ವಾಗತಿಸಿದರು. ಸಮೃದ್ಧಿ ಮಹಿಳಾ ಮಂಡಳಿ ಕಾರ್ಯದರ್ಶಿ ಆಶಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿ, ಸಹನಾ ಕೆ ಹೆಬ್ಬಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News