ಲಾಕ್‌ಡೌನ್ ಅವಧಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ 350ಕ್ಕೂ ಅಧಿಕ ಬೋಧಕ ಸಿಬ್ಬಂದಿ ನೇಮಕ

Update: 2020-09-23 17:00 GMT

ಹೊಸದಿಲ್ಲಿ,ಸೆ.23: ಲಾಕ್‌ಡೌನ್ ಅವಧಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳಿಗೆ 300ಕ್ಕೂ ಅಧಿಕ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆಯೆಂದು ಕೇಂದ್ರ ಸರಕಾರವು  ಸಂಸತ್‌ಗೆ ತಿಳಿಸಿದೆ.

  ಈ ವಿದ್ಯಾಲಯಗಳಿಗೆ ಆಗಸ್ಟ್‌ನಲ್ಲಿ ಆನ್‌ಲೈನ್ ಮೂಲಕ ನಡೆಸಲಾದ ನೇಮಕಾತಿ ಪ್ರಕ್ರಿಯೆಯು ಭಾರೀ ವಿವಾದವನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಬಳಿಕ ಸೆಪ್ಟೆಂಬರ್‌ನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪುನಾರಂಭಿಸಲಾಗಿತ್ತು.

  ಲಾಕ್‌ಡೌನ್ ಸಂದರ್ಭದಲ್ಲಿ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಗೆ 350ಕ್ಕೂ ಅಧಿಕ ನೇಮಕಾತಿಗಳನ್ನು ಮಾಡಲಾಗಿದೆ. ಕೇಂದ್ರೀಯ ವಿವಿಗಳಲ್ಲಿ 116, ಐಐಟಿಗಳ ಲ್ಲಿ 170, ಐಐಎಂಗಳಲ್ಲಿ 46 ಹಾಗೂ ಐಐಟಿಗಳಲ್ಲಿ 18 ಹುದ್ದೆಗಳಿಗೆ ನೇಮಕಾತಿಯಾಗಿತ್ತು ಎಂದು ಶಿಕ್ಷಣ ,ಸಚಿವಾಲಯ ತಿಳಿಸಿದೆ.

  ಲಾಕ್‌ಡೌನ್‌ನಿಂದಾಗಿ ಅಭ್ಯರ್ಥಿಗಳಿಗೆ ಆಯ್ಕೆ ಸಮಿತಿಯ ಮುಂದೆ ದೈಹಿಕವಾಗಿ ಹಾಜರಾಗಲು ಅಸಾಧ್ಯವಾದ ಕಾರಣ ಈ ಸಂಸ್ಥೆಗಳು ಆನ್‌ಲೈನ್ ಮೂಲಕ ಸಂದರ್ಶನ ನಡೆಸಿದ್ದವು ಎಂದು ಸಚಿವಾಲಯ ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News