ಸೆ.24ರಂದು ಜಲಮಂಡಳಿ ನೀರಿನ ಅದಾಲತ್

Update: 2020-09-23 17:48 GMT

ಬೆಂಗಳೂರು, ಸೆ.23: ಬೆಂಗಳೂರು ಜಲಮಂಡಳಿಯಿಂದ ವಿವಿಧ ಉಪವಿಭಾಗಗಳಲ್ಲಿ ಸೆ.24ರಂದು ಬೆಳಗ್ಗೆ 9:30ರಿಂದ 11ಗಂಟೆವರೆಗೆ ನೀರು ಸರಬರಾಜು, ಸಮಸ್ಯೆ ಪರಿಹಾರದಲ್ಲಿ ವಿಳಂಬ ಹಾಗೂ ಒಳಚರಂಡಿಗೆ ಸಂಬಂಧಿಸಿದಂತೆ ಕುಂದು ಕೊರತೆ ಆಲಿಸಲು ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಉಪವಿಭಾಗದ ದಕ್ಷಿಣ ವಿಲೇಜ್-2 ಸೆಂಟ್ರಲ್ ಜೈಲು ರಸ್ತೆ, ಜಿಎಲ್‍ಆರ್, ಕೂಡ್ಲು (9845444090), ಆಗ್ನೇಯ -5 ಕಪಿಲ ಭವನ, 1ನೇ ಮಹಡಿ, 4ನೇ ಬ್ಲಾಕ್, ಜಯನಗರ (22945148), 4ನೇ ಬ್ಲಾಕ್ ಬನಶಂಕರಿ, 5ನೇ ಹಂತ, ಪವನಪುರ, ರಾಘವೇಂದ್ರ ಸ್ವಾಮಿ ದೇವಸ್ಥಾನ ಮುಂದೆ ಲಿಂಗಧೀರನಹಳ್ಳಿ, ಪಶ್ಚಿಮ ವಿಲೇಜ್-1 4ನೇ ಬ್ಲಾಕ್, ಬಿ.ಎಸ್.ಕೆ 6ನೇ ಹಂತ, ಪವನಪುರ, ನೈರುತ್ಯ-4 ಮೊದಲನೇ ಮಹಡಿ, ಬನಗಿರಿನಗರ, ವಾಟರ್ ಟ್ಯಾಂಕ್ ಬಳಿ, ಬನಶಂಕರಿ 3ನೇ ಹಂತ, 1ನೇ ಮುಖ್ಯರಸ್ತೆ, (22945198), ಪೂರ್ವ ವಿಲೇಜ್-3 ಸೆಂಟ್ರಲ್ ಜೈಲು ರಸ್ತೆ, ಕೂಡ್ಲು ಜಿ ಎಲ್ ಆರ್, ಕೂಡ್ಲು, ಹೊಸ ರಸ್ತೆ, ಅರಳೂರು (9591987951), ಪೂರ್ವ ವಿಲೇಜ್-1 ಬಂಜಾರ ಲೇಔಟ್, ಎಸ್.ಟಿ.ಪಿ ಆವರಣ, ಹೊರಮಾವು (9945233444), ವಾಯುವ್ಯ -5 ಶ್ರೀರಾಮ ಡಿಲಕ್ಸ್ ಹೋಟೆಲ್ ಹಿಂಭಾಗ, ಪೀಣ್ಯ 2ನೇ ಹಂತ, ಬಿಎಂಟಿಸಿ ಬಸ್ ನಿಲ್ದಾಣದ ಹತ್ತಿರ (28372030), ಈಶಾನ್ಯ-3 ನಂ.3, ಪಿ ಅಂಡ್ ಟಿ ಕಾಲನಿ, ಆರ್.ಟಿ.ನಗರ (22945139), ಉತ್ತರ-1 8ನೇ ಮುಖ್ಯ ರಸ್ತೆ, ಡಿ ಬ್ಲಾಕ್, ಸಹಕಾರನಗರ (9845444123) ದಲ್ಲಿ ನಡೆಯುವ ಅದಾಲತ್‍ನಲ್ಲಿ ಅಧಿಕಾರಿಗಳಿಂದ ಮಾಹಿತಿ, ಪರಿಹಾರ ಕಂಡುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ 1916, ದೂರವಾಣಿ 22238888ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News