ಐಪಿಎಲ್: ಗರಿಷ್ಠ ವೈಯಕ್ತಿಕ ರನ್ ಗಳಿಸಿದ ಮೊದಲ ಭಾರತೀಯ ರಾಹುಲ್

Update: 2020-09-24 17:36 GMT

ದುಬೈ, ಸೆ.24: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ  ಇನಿಂಗ್ಸ್ ಆರಂಭಿಸಿದ ಪಂಜಾಬ್ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್್ 13ನೇ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು. 132 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ಬ್ಯಾಟ್ಸ್ ಮನ್ ಎಂಬ ಕೀರ್ತಿಗೂ ಭಾಜನರಾದರು.ಇದರೊಂದಿಗೆ ರಿಷಭ್ ಪಂತ್ ದಾಖಲೆಯನ್ನು ಮುರಿದರು.

2015ರಲ್ಲಿ ದ. ಆಫ್ರಿಕಾದ ಎಬಿಡಿವಿಲಿಯರ್ಸ್ ಮುಂಬೈ ವಿರುದ್ಧ ಔಟಾಗದೆ 133 ರನ್ ಗಳಿಸಿದ್ದರು. ಇದು ಟೂರ್ನಿಯಲ್ಲಿ ದಾಖಲಾಗಿದ್ದ ಗರಿಷ್ಠ ಸ್ಕೋರಾಗಿದೆ.

ಔಟಾಗದೆ 132 ರನ್ ಗಳಿಸಿದ ರಾಹುಲ್ ಪಂಜಾಬ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಲು ನೆರವಾದರು. ರಾಹುಲ್ ಅವರ 69 ಎಸೆತಗಳ ಭರ್ಜರಿ ಬ್ಯಾಟಿಂಗ್ ನಲ್ಲಿ 14 ಬೌಂಡರಿ ಹಾಗೂ 7 ಸಿಕ್ಸರ್ ಗಳಿದ್ದವು.  ಶತಕದ ಹಾದಿಯಲ್ಲಿ 60 ಇನಿಂಗ್ಸ್ ಗಳಲ್ಲಿ 2,000 ರನ್ ಗಳಿಸಿದ ರಾಹುಲ್ ವೇಗವಾಗಿ ಈ ಮೈಲುಗಲ್ಲು ತಲುಪಿದ ಮೊದಲ ಬ್ಯಾಟ್ಸ್ ಮನ್  ಎಂಬ ಹಿರಿಮೆಗೆ ಪಾತ್ರರಾದರು.

ರಾಹುಲ್ 132 ರನ್ ಹಾದಿ ….

ಮೊದಲ 30 ರನ್ ಗಳು: 23 ಎಸೆತಗಳು

ಮುಂದಿನ 30 ರನ್ ಗಳು: 19 ಎಸೆತಗಳು

ಮುಂದಿನ 30 ರನ್ ಗಳು: 18 ಎಸೆತಗಳು

ಮುಂದಿನ 42 ರನ್ ಗಳು: 9 ಎಸೆತಗಳಲ್ಲಿ ದಾಖಲಾದವು.

ಐಪಿಎಲ್ ನಲ್ಲಿ ಗರಿಷ್ಟ ವೈಯಕ್ತಿಕ ಸ್ಕೋರ್ ಗಳಿಸಿದ ನಾಯಕರುಗಳು

ಔಟಾಗದೆ 132: ಕೆಎಲ್ ರಾಹುಲ್

126-ವಾರ್ನರ್, 2017

119- ಸೆಹ್ವಾಗ್ 2011

113-ಕೊಹ್ಲಿ, 2016

109-ಕೊಹ್ಲಿ, 2016

108-ಕೊಹ್ಲಿ, 2016

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News