ವಿಧಾನ ಪರಿಷತ್‍ನಲ್ಲಿ ಕ್ರಷರ್ ಗಳ ನಿಯಂತ್ರಣ ವಿಧೇಯಕ2020 ಅನುಮೋದನೆ

Update: 2020-09-24 17:37 GMT

ಬೆಂಗಳೂರು, ಸೆ.24: ಕಲ್ಲುಪುಡಿ ಮಾಡುವ ಘಟಕಗಳ(ಕ್ರಷರ್ ಗಳ) ನಿಯಂತ್ರಣ(ತಿದ್ದುಪಡಿ) ವಿಧೇಯಕ 2020 ಮಂಡಿಸಲಾಯಿತು. ವಿಧಾನ ಪರಿಷತ್‍ನಲ್ಲಿ ಈ ವಿಧೇಯಕವನ್ನು ಅಂಗೀಕರಿಸಲಾಯಿತು. 

ಕಲ್ಲು ಪುಡಿ ಮಾಡುವ ಘಟಕಗಳ(ಕ್ರಷರ್) ಪರವಾನಿಗೆ ಸಂಬಂಧಿಸಿದ ಸಂಕೀರ್ಣತೆಯನ್ನು ಕಡಿಮೆಗೊಳಿಸುವ ಈ ವಿಧೇಯಕಕ್ಕೆ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಗಿದೆ.

ಯಾವುದೇ ಜನ ವಸತಿ, ಶಾಲೆ, ದೇವಾಲಯ ಅಥವಾ ರಸ್ತೆಯು ಸುರಕ್ಷಿತ ವಲಯದ ಘೋಷಣೆಯ ಬಳಿಕ ಬಂದರೆ ಕ್ರಷರ್ ಗಳನ್ನು ಮುಂದುವರಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಲೈಸೆನ್ಸ್ ಮಂಜೂರಾತಿ ಮತ್ತು ವಿಸ್ತರಣೆಗೆ ಅಡ್ಡಿ ಆಗುವುದಿಲ್ಲ ಎಂದು ಮಸೂದೆ ತಿಳಿಸಿದೆ. ಈ ಬಗ್ಗೆ ಗಣಿ ಸಚಿವ ಸಿ.ಸಿ.ಪಾಟೀಲ ವಿವರಣೆ ನೀಡಿದರು.

ಲೈಸೆನ್ಸಿಂಗ್ ಪ್ರಾಧಿಕಾರದ ಅನುಮೋದನೆಯೊಡನೆ ಲೈಸೆನ್ಸ್ ಹೊಂದಿರುವವನಿಗೆ, ವ್ಯವಹಾರದಲ್ಲಿ ಹೂಡಿಕೆ ಮಾಡುವ ಬೇರೊಬ್ಬರಿಗೆ ಲೈಸೆನ್ಸ್ ವರ್ಗಾಯಿಸಲು ಅವಕಾಶ. ವಾರ್ಷಿಕ ನಿಯಂತ್ರಣಾ ಶುಲ್ಕವನ್ನು ಪಾವತಿಸುವುದಕ್ಕೆ ಒಳಪಟ್ಟು ಅಸ್ತಿತ್ವದಲ್ಲಿರುವ ಕಲ್ಲುಪುಡಿ ಮಾಡುವ ಘಟಕಗಳ(ಕ್ರಷರ್ ಗಳ) ಲೈಸೆನ್ಸ್‍ನ ಮಂಜೂರಾತಿ ದಿನಾಂಕದಿಂದ 20 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಈಗ ಅದು 10 ವರ್ಷಗಳವರೆಗೆ ಇರಲಿದೆ.

ಪ್ರಧಾನ ಜಿಲ್ಲಾ ರಸ್ತೆಗಳ ಅಥವಾ ಇತರ ರಸ್ತೆಗಳ ಗಡಿಯಿಂದ ನೂರು ಮೀಟರ್ ಗಳೊಳಗೆ ಕ್ರಷರ್ ಇರಬಾರದು ಎಂಬ ನಿಯಮವನ್ನು ಬದಲಿಸಿ 50 ಮೀಟರ್ ಒಳಗೆ ಎಂದು ಮಾಡಲಾಗಿದೆ. ಇತರ ರಸ್ತೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲದಿರುವುದರಿಂದ ಅರ್ಜಿದಾರರಿಗೆ ತೊಂದರೆ ಆಗುತ್ತಿತ್ತು. ಆ ತೊಂದರೆ ಕಡಿಮೆ ಮಾಡಿ ಸ್ಪಷ್ಟನೆ ಒದಗಿಸಲು ತಿದ್ದುಪಡಿ ಅಗತ್ಯವಿತ್ತು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News