ನಿಧಾನಗತಿಯ ಬೌಲಿಂಗ್: ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

Update: 2020-09-25 05:08 GMT

ಹೊಸದಿಲ್ಲಿ, ಸೆ.25: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗುರುವಾರ ರಾತ್ರಿ ದುಬೈನಲ್ಲಿ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿರುವುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ ಹೇರಲಾಗಿದೆ.

ಗುರುವಾರ ಕೊಹ್ಲಿಗೆ ಒಳ್ಳೆಯ ದಿನವಾಗಿರಲಿಲ್ಲ. ಆರ್‌ಸಿಬಿ ತಂಡ ಪಂಜಾಬ್ ವಿರುದ್ಧ 97 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ನಾಯಕನಾಗಿ ಕೊಹ್ಲಿ ಯಾವ ವಿಭಾಗದಲ್ಲೂ ಕೊಡುಗೆ ನೀಡಿರಲಿಲ್ಲ.

ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಈ ಋತುವಿನಲ್ಲಿ ಆರ್‌ಸಿಬಿ ಸ್ಲೋ ಓವರ್‌ರೇಟ್ ವಿಚಾರದಲ್ಲಿ ಮಾಡಿರುವ ಮೊದಲ ತಪ್ಪು ಇದಾಗಿದೆ. ಹೀಗಾಗಿ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಕೊಹ್ಲಿ ದುಬೈ ಅಂತರ್‌ರಾಷ್ಟ್ರೀಯ ಸ್ಟೇಡಿಯಂನಲ್ಲಿ ಶತಕವೀರ ರಾಹುಲ್ ನೀಡಿದ್ದ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದು ತಂಡಕ್ಕೆ ದುಬಾರಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News