ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ಪರಿಷತ್‍ನಲ್ಲಿ ಅನುಮೋದನೆ

Update: 2020-09-25 18:10 GMT

ಬೆಂಗಳೂರು, ಸೆ.25: ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕವನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪರಿಷತ್‍ನಲ್ಲಿ ಮಂಡಿಸಿದರು. ಎಲ್ಲ ಹಂತದ ಕೈಗಾರಿಕೆಗೂ ಇದು ಅನ್ವಯ. ಎಲ್ಲ ಪರವಾನಿಗೆ ಪಡೆಯುವುದು ಸರಳವಾಗಲಿದೆ. ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದರು. ಪ್ರಸ್ತಾವವನ್ನು ಸಭಾಪತಿಗಳು ಮಂಡಿಸಿ ಅನುಮೋದನೆ ಪಡೆದು ಅಂಗೀಕರಿಸಿದರು.

ವೀಣಾ ಅಚ್ಚಯ್ಯ ಪ್ರಶ್ನೆಗೆ ಭರವಸೆ: ನಿಯಮ 330ರ ಅಡಿ ಸದಸ್ಯೆ ವೀಣಾ ಅಚ್ಚಯ್ಯ ಪ್ರಸ್ತಾಪಿಸಿದ ಭೂ ಕುಸಿತ ಹಾಗೂ ಧಾರ್ಮಿಕ ವಿಚಾರದ ಕುರಿತು ಸರಕಾರ ಗಮನ ಹರಿಸಲಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಶಿವಲಿಂಗ ವಿಸರ್ಜನೆಯಿಂದ ಸಮಸ್ಯೆ ಆಗಲಿದೆ ಎಂದು ಹೇಳಿದ್ದಾರೆ ಇಲಾಖೆಯ ಆಗಮ ಪಂಡಿತರು ಹಾಗೂ ಸದಸ್ಯೆಯನ್ನೂ ಕೂರಿಸಿ ಚರ್ಚಿಸುತ್ತೇನೆ. ಭೂ ಕುಸಿತ ಸಂಬಂಧ ತಜ್ಞರನ್ನು ಕಳಿಸಿಕೊಟ್ಟು ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News