ಉಕ್ರೇನ್ ವಿಮಾನ ಪತನ: 20 ಸೈನಿಕರು ಸೇರಿ 26 ಸಾವು

Update: 2020-09-26 17:28 GMT

ಕೀವ್ (ಯುಕ್ರೇನ್), ಸೆ. 26: ಯುಕ್ರೇನ್ ವಾಯುಪಡೆಯ ವಿಮಾನವೊಂದು ದೇಶದ ಪೂರ್ವ ಭಾಗದ ಖಾರ್ಕಿವ್ ಸಮೀಪ ಶುಕ್ರವಾರ ಪತನಗೊಂಡಿದ್ದು, 26 ಮಂದಿ ಮೃತಪಟ್ಟಿದ್ದಾರೆ ಹಾಗೂ ಒಬ್ಬರು ಬದುಕುಳಿದಿದ್ದಾರೆ.

ಬದುಕುಳಿದಿದ್ದ ಇಬ್ಬರ ಪೈಕಿ ಒಬ್ಬ ವ್ಯಕ್ತಿಯು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

20 ಯುವ ಕ್ಯಾಡೆಟ್‌ಗಳು ಮತ್ತು ಏಳು ಸಿಬ್ಬಂದಿಯನ್ನು ಹೊತ್ತ ವಾಯುಪಡೆಯ ಸಾರಿಗೆ ವಿಮಾನವು ಶುಕ್ರವಾರ ಸಂಜೆ ಪತನಗೊಂಡಿತ್ತು.

ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವಿಮಾನ ಅಪ್ಪಳಿಸಿದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಚುಗ್‌ಯಿವ್ ಸೇನಾ ನೆಲೆಯಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿ ವಿಮಾನ ಅಪ್ಪಳಿಸಿದ ಬಳಿಕ ಅದಕ್ಕೆ ಬೆಂಕಿ ಹೊತ್ತಿಕೊಂಡಿತು. 22 ಮಂದಿ ಮೃತಪಟ್ಟಿದ್ದರು ಹಾಗೂ ಇಬ್ಬರು ಜೀವಂತವಾಗಿದ್ದರು. ಶನಿವಾರ ಇನ್ನೂ ಮೂರು ಮೃತದೇಹಗಳು ಪತ್ತೆಯಾದವು ಹಾಗೂ ಬದುಕುಳಿದಿದ್ದವರ ಪೈಕಿ ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News