ವಿಷನ್ 2020 ವಿಶೇಷ ಅಂಚೆ ಲಕೋಟೆ ಬಿಡುಗಡೆ

Update: 2020-09-26 16:30 GMT

ಬೆಂಗಳೂರು, ಸೆ.26: ಭಾರತೀಯ ಅಂಚೆ ಇಲಾಖೆಯು ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ಸಂಸ್ಥೆಯ ಸಹಯೋಗದೊಂದಿಗೆ ಕುರುಡುತನ ನಿಮೂರ್ಲನೆ ಉದ್ದೇಶ ಹೊಂದಿರುವ ಜಾಗತಿಕ ಉಪಕ್ರಮವಾದ ‘ವಿಷನ್ 2020’ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.

ಬೆಂಗಳೂರಿನ ಪ್ರಧಾನ ಅಂಚೆ ಇಲಾಖೆಯ ಮೇಘದೂತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅಂಚೆ ಲಕೋಟೆ ಬಿಡುಗಡೆ ಮಾಡಿದರು.

‘ವಿಷನ್ 2020‘ ಎನ್ನುವುದು 2020ರ ವೇಳೆಗೆ ತಪ್ಪಿಸಬಹುದಾದ ಕುರುಡುತನವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿರುವ ಜಾಗತಿಕ ಉಪಕ್ರಮವಾಗಿದೆ. ಮೈಕ್ರೋ ವಿಷನ್ ಸಂಸ್ಥೆಯು ತನ್ನ 20ನೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಲಕೋಟೆಯನ್ನು ತನ್ನ ಉಪಕ್ರಮವನ್ನು ಸಾಧಿಸಲು ಶ್ರಮಿಸುತ್ತಿರುವ ಎಲ್ಲಾ ಭಾರತೀಯ ನೇತ್ರಶಾಸ್ತ್ರಜ್ಞರಿಗೆ ಅರ್ಪಿಸಿದೆ. ಈ ವಿಶೇಷ ಅಂಚೆ ಲಕೋಟೆಯು ಬೆಂಗಳೂರಿನ ಅಂಚೆ ಮಹಾಕಾರ್ಯಾಲಯ, ಮಂಗಳೂರು, ಮೈಸೂರು, ಬೆಳಗಾವಿ ಮುಖ್ಯ ಅಂಚೆ ಕಚೇರಿಗಳು ಮತ್ತು ಇ-ಪೋಸ್ಟ್ ಆಫೀಸ್‍ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಎಸ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಮೈಕ್ರೋ ವಿಷನ್ ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಸಭ್ಯಸಾಚಿ ಮನ್ನಾ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News