×
Ad

ಗಾಂಜಾ ಮಾರಾಟ ಆರೋಪ: ಮೂವರ ಬಂಧನ

Update: 2020-09-27 17:51 IST

ಬೆಂಗಳೂರು, ಸೆ.27: ದೊಡ್ಡಬಳ್ಳಾಪುರದ ಉಜ್ಜನಿ ಬೆಟ್ಟದಿಂದ ಹಸಿ ಗಾಂಜಾ ತಂದು ಒಣಗಿಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಆರ್‍ಟಿ ನಗರ ಪೊಲೀಸರು 28 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಆಂಧ್ರದ ಹಿಂದುಪುರದ ಬುಡೇನ್ ಸಾಹೇಬ್(59), ಶ್ರೀನಿವಾಸಪುರ ಚಂದ್ರಪ್ಪ(40), ಚಿಕ್ಕಬಳ್ಳಾಪುರದ ಗಂಜಿಗುಂಟೆಯ ಮಾರಪ್ಪ(56) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಸುಲ್ತಾನ್ ಪಾಳ್ಯದ ಗಾಂಜಾ ವ್ಯಸನಿ ಕಾರ್ತಿಕ್ ಎಂಬಾತ ನೀಡಿದ ಮಾಹಿತಿಯಾಧರಿಸಿ ಆರೋಪಿ ಬುಡೇನ್ ಸಾಹೇಬ್‍ನನ್ನು ಬಂಧಿಸಿ ಆತ ನೀಡಿದ ಮಾಹಿತಿಯಾಧರಿಸಿ ಉಳಿದಿಬ್ಬರನ್ನು ಬಂಧಿಸಲಾಗಿದೆ.

ಆರೋಪಿಗಳು ದೊಡ್ಡಬಳ್ಳಾಪುರದ ಉಜ್ಜನಿ ಬೆಟ್ಟಕ್ಕೆ ಹಗಲಿನ ವೇಳೆ ಹೋಗಿ ಗಾಂಜಾ ಬೆಳೆದಿರುವುದನ್ನು ಗುರುತಿಸಿ ರಾತ್ರಿ ವೇಳೆ ಯಾರಿಗೂ ಗೊತ್ತಾಗದಂತೆ ಕತ್ತರಿಸಿಕೊಂಡು ಬಂದು ಒಣಗಿಸಿ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News