ಬೆಂಗಳೂರು: ಚಿಕಿತ್ಸೆ ಸಿಗದೆ ನಡು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2020-09-27 12:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.27: ಚಿಕಿತ್ಸೆ ಸಿಗದೆ ತುಂಬು ಗರ್ಭಿಣಿ ನಡುರಾತ್ರಿ ಯಾತನೆ ಅನುಭವಿಸಿದ ಘಟನೆ ನಗರದ ಸಿಂಗಸಂದ್ರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎನ್ನಲಾಗಿದೆ.

ನಗರದ ಸಿಂಗಸಂದ್ರದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ರಾತ್ರಿ ವೇಳೆ ಮುಚ್ಚಿದ ವೈದ್ಯರು ಹೊರಗೆ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇತ್ತ ಸರಕಾರಿ ಆಸ್ಪತ್ರೆ ಮುಂದೆ ಮಧ್ಯರಾತ್ರಿ ಒಂದು ಗಂಟೆ ಕಾಲ ನರಳಾಡಿದ ಗರ್ಭಿಣಿಗೆ ವಿಪರೀತ ಹೆರಿಗೆ ನೋವುಂಟಾಗಿ ನಡು ರಸ್ತೆಯಲ್ಲೇ ಹೆರಿಗೆಯಾಗಿದೆ. ತಾಯಿ-ಮಗುವಿನ ಕರುಳ ಬಳ್ಳಿ ಬಿಡಿಸದೆ ರಕ್ತಸ್ರಾವದ ಮಧ್ಯೆಯೇ ಮತ್ತೊಂದು ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಪಕ್ಕದಲ್ಲಿದ್ದ ಆಂಬ್ಯುಲೆನ್ಸ್ ಡ್ರೈವರ್ ಗಳು ತಾಯಿ-ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸಿಕೊಡಲು ಸಹಾಯ ಮಾಡಿದ್ದಾರೆ. ಈ ಮೂಲಕ ಇಬ್ಬರನ್ನು ರಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News