ಬಲವಂತವಾಗಿ ಮಾರ್ಕೆಟ್ ಬಂದ್ ಮಾಡಿಸಿದರೆ ಕ್ರಿಮಿನಲ್ ಕೇಸ್: ಬಿಬಿಎಂಪಿ ಆಯುಕ್ತ ಎಚ್ಚರಿಕೆ

Update: 2020-09-27 14:16 GMT
ಮಂಜುನಾಥ್ ಪ್ರಸಾದ್

ಬೆಂಗಳೂರು, ಸೆ.27: ಸೆ.28ರ ಸೋಮವಾರದಂದು ಯಾವ ಮಾರ್ಕೆಟ್‍ಗಳನ್ನು ಬಂದ್ ಮಾಡುವಂತಿಲ್ಲ. ಬಲವಂತವಾಗಿ ಬಂದ್ ಮಾಡಲು ಬಂದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಐಕ್ಯ ಹೋರಾಟ ಸಮಿತಿಯಿಂದ ಸೋಮವಾರದಂದು ಕರ್ನಾಟಕ ಬಂದ್‍ಗೆ ಮುಂದಾಗಿದೆ. ರೈತರ ಹೋರಾಟಕ್ಕೆ ಬೀದಿ ಬದಿ ವ್ಯಾಪಾರಿಗಳ ಸಂಘ ಕೂಡ ಬೆಂಬಲ ನೀಡಿದೆ. ಆದರೆ ಯಾವ ಮಾರ್ಕೆಟ್‍ಗಳನ್ನೂ ಬಂದ್ ಮಾಡುವಂತಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ರೈತರ ಬೆಳೆ ಇಲ್ಲ ಅಂದರೆ ವ್ಯಾಪಾರಿಗಳೂ ಇಲ್ಲ ಎಂದು ಸ್ವಇಚ್ಛೆಯಿಂದ ಮಾರ್ಕೆಟ್ ಬಂದ್‍ಗೆ ವ್ಯಾಪಾರಿಗಳು ನಿರ್ಧರಿಸಿದ್ದರು. ಅಲ್ಲದೇ ಕೆಲ ಕನ್ನಡ ಪರ ಸಂಘಟನೆಗಳು ನಗರದಲ್ಲಿರುವ ಮಾರ್ಕೆಟ್‍ಗಳನ್ನ ಬಂದ್ ಮಾಡಲು ನಿರ್ಧರಿಸಿದ್ದವು. ಹೀಗಾಗಿ ಅವರ ಪ್ರಯತ್ನ ಸಫಲವಾಗಬಾರದೆಂದು ಇಂತಹ ನಿರ್ಧಾರಕ್ಕೆ ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ.

ಸೆ.28ರ ಸೋಮವಾರದಂದು ಯಾವುದೇ ಮಾರುಕಟ್ಟೆಗಳನ್ನ ಮುಚ್ಚಬೇಡಿ. ನಗರದ ಎಲ್ಲಾ ಮಾರ್ಕೆಟ್‍ಗಳನ್ನ ತೆರೆಯಿರಿ ಎಂದು ಆಯುಕ್ತರು ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News