ಬೆಂಗಳೂರು: ದೃಷ್ಟಿ ತೆಗೆಯುವ ನೆಪದಲ್ಲಿ ಚಿನ್ನಾಭರಣ, ನಗದು ದೋಚಿದ ಮಂಗಳಮುಖಿಯರು

Update: 2020-09-27 16:52 GMT

ಬೆಂಗಳೂರು, ಸೆ.27: ಅಕ್ಷತೆ ಹಾಕಿ ದೃಷ್ಟಿ ತೆಗೆಯುವ ನೆಪದಲ್ಲಿ ಮಂಗಳಮುಖಿಯರ ತಂಡವೊಂದು ಅಂಗಡಿಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ ಘಟನೆ ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸೆ.23ರಂದು ವಿದ್ಯಾರಣ್ಯಪುರದಲ್ಲಿನ ಅನುವೃದ್ಧಿ ಕೋ-ಆಪರೇಟಿವ್ ಸೊಸೈಟಿಯ ಶಾಖಾ ಕಚೇರಿ ಉದ್ಘಾಟಿಸಲಾಗಿತ್ತು. ಈ ವೇಳೆ ಕಚೇರಿಯ ದ್ವಾರಕ್ಕೆ ದೃಷ್ಟಿ ತೆಗೆಯುವ ನೆಪದಲ್ಲಿ ಅಲ್ಲಿಗೆ ಬಂದ ಮಂಗಳಮುಖಿಯರ ತಂಡ, ನಿಂಬೆಹಣ್ಣಿನಿಂದ ದ್ವಾರದ ದೃಷ್ಟಿ ತೆಗೆದ ಬಳಿಕ ದೇವರ ಫೋಟೋಗೆ ಅಕ್ಷತೆ ಹಾಕಲು ಕಚೇರಿಯ ಒಳಕ್ಕೆ ಪ್ರವೇಶಿಸಿದ್ದಾರೆ.

ಹೀಗೆ ಒಳ ಹೋದ ತಂಡದ ಸದಸ್ಯರು, ಪೂರ್ವ ಸಂಚಿನಂತೆ ಕಚೇರಿಯೊಳಗಿದ್ದ 1.65 ಲಕ್ಷ ರೂ. ನಗದು, 23 ಗ್ರಾಂ ತೂಕದ 1 ಚಿನ್ನದ ಸರ ಮತ್ತು 1 ಮೊಬೈಲ್ ದೋಚಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದೆ. ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News